ಅರಟಾಳ ಗ್ರಾಪಂನಲ್ಲಿ ರವೀಂದ್ರ ಬಂಗಾರೆಪ್ಪನವರನ್ನು ಗಣ್ಯರು ಸನ್ಮಾನಿಸಿದರು. ಎ.ಜಿ.ಎಡಕೆ, ಆನಂದ ಗಿರಿಜಾಗೋಳ, ಯಲ್ಲಪ್ಪ ಹಟ್ಟಿ ಇತರರಿದ್ದರು.
ಅರಟಾಳ: ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯಿತಿಗೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ಅರಟಾಳ ಗ್ರಾಮ ಪಂಚಾಯಿತಿ ಯೋಜನೆಗಳ ಸಾಕಷ್ಟು ಲಾಭ ಪಡೆದುಕೊಂಡಿದೆ. ಅಭಿವೃದ್ಧಿ ವಿಷಯಲ್ಲಿ ತಾಲೂಕಿನಲ್ಲಿ ಅರಟಾಳ ಗ್ರಾಪಂ ಮುನ್ನಡೆ ಸಾಧಿಸುತ್ತಿದೆೆ ಎಂದರು. ಪಿಡಿಒ ಎ.ಜಿ.ಎಡಕೆ ಮಾತನಾಡಿ, ಜನಪರ ಯೋಜನೆ ಅರಟಾಳ ಗ್ರಾಮ ಪಂಚಾಯಿತಿಗೆ ತಲುಪಿಸುವಲ್ಲಿ ರವೀಂದ್ರ ಬಂಗಾರೆಪ್ಪನವರ ಕೊಡುಗೆ ಅಪಾರ ಎಂದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆನಂದ ಗಿರಿಜಾಗೋಳ, ಯಲ್ಲಪ್ಪ ಹಟ್ಟಿ, ಮಹಾದೇವ ಡಂಗಿ, ಮಾಳಪ್ಪ ಕಾಂಬಳೆ, ಮಹಾಂತೇಶ ವಜ್ರವಾಡ, ಮಹಾದೇವ ಮಾದರ, ಕಾಶಪ್ಪ ಮಾದರ ಇತರರು ಇದ್ದರು.