ಬೆಳಗಾವಿಯಲ್ಲಿ ಸೋಮವಾರ ಜರುಗಿದು ಮನೆಗೊಂದ ಗ್ರಂಥಾಲಯ ಅಭಿಯಾನದ ಉದ್ಘಾಟನೆಯಲ್ಲಿ ಡಾ.ಡಿ.ಎಸ್.ಚೌಗಲೆ, ಡಾ.ಮಾನಸ, ಡಾ.ವೈ.ಬಿ.ಹಿಮ್ಮಡಿ, ಶ್ರೀನಿವಾಸ ಕರಿಯಪ್ಪ, ಡಾ.ಕುಶಾಲ ಬರಗೂರು, ಶಂಕರ ಬಾಗೇವಾಡಿ ಇತರರಿದ್ದರು.
ಬೆಳಗಾವಿ: ಆಧುನಿಕ ಜೀವನದಲ್ಲಿ ಸಾಮಾಜಿಕ ನೆಲೆಗಟ್ಟಿನ ಸಂಬಂಧ ಬೆಸೆಯುವಲ್ಲಿ ಪುಸ್ತಕಗಳ ಪಾತ್ರ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ನಾಟಕಕಾರ ಡಾ.ಡಿ.ಎಸ್.ಚೌಗಲೆ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಏರ್ಪಡಿಸಿರುವ "ಮನೆಗೊಂದು ಗ್ರಂಥಾಲಯ' ಅಭಿಯಾನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಡಾ.ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಅಧ್ಯ ಡಾ.ವೈ.ಬಿ.ಹಿಮ್ಮಡಿ ಮಾತನಾಡಿ, ಪುಸ್ತಕ ಓದುವ ಸಂಸತಿ ಹೆಚ್ಚಾದಂತೆ ಬರಹಗಾರರು, ಪ್ರಕಾಶಕರು, ಮುದ್ರಕರ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದರು.
ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ಮಾನಸ ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್.ಬಿ.ಕೋಲ್ಕಾರ, ಡಾ.ಮಂಜುನಾಥ ಪಾಟೀಲ, ಡಾ.ಬಾಲಕೃಷ್ಣ ನಾಯಕ, ರೇಣುಕಾ ಮಜಲಟ್ಟಿ, ತೇಜಸ್ವಿನಿ ಬಾಗೇವಾಡಿ ಇತರರಿದ್ದರು.
ಜಾಗೃತ ಸಮಿತಿ ಜಿಲ್ಲಾ ಸಂಚಾಲಕರಾಗಿ ಶಂಕರ ಬಾಗೇವಾಡಿ, ಸದಸ್ಯರಾಗಿ ಡಾ.ಕವಿತಾ ಕುಸುಗಲ್, ಡಾ.ಶೋಭಾ ನಾಯಕ, ಡಾ.ಪಿ.ನಾಗರಾಜ, ಡಾ.ಸಂತೋಷ ನಾಯಕ, ನದೀಮ ಸನದಿ, ವಿನೋದ ಪಾಟೀಲ, ಜಗದೀಶ ಹೊಸಮನಿ, ಲಲಿತಾ ಕ್ಯಾಸನ್ನವರ, ಸುಮಿತ್ರಾ ಮುಗಳಖೋಡ ನೇಮಕಗೊಂಡರು. ಶ್ರೀನಿವಾಸ ಕರಿಯಪ್ಪ ಸ್ವಾಗತಿಸಿದರು. ಡಾ.ಕುಶಾಲ ಬರಗೂರು ಪ್ರಾಸ್ತಾವಿಕ ಮಾತನಾಡಿದರು. ಶಂಕರ ಬಾಗೇವಾಡಿ ನಿರೂಪಿಸಿದರು. ಪ್ರೊ.ದೇಮಣ್ಣ ಸೊಗಲದ ವಂದಿಸಿದರು.