ಭಿರಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವೃಕ್ಷ ಸಂಕಲ್ಪ ಕಾರ್ಯಕ್ರಮದಲ್ಲಿ ಶಿವಪ್ರಸಾದ ದೇವರು ಮಾತನಾಡಿದರು. ವಿನೋದ ಮಾವರಕರ, ಗಣೇಶ ಹೆಗಡೆ, ಮಹಾದೇವ ಬೋರಗಾಂವೆ, ಶರಣಬಸು ಕೆಂಭಾವಿ ಇತರರಿದ್ದರು.
- ಶಿವಪ್ರಸಾದ ದೇವರು ರೈತರಿಗೆ ಸಲಹೆ
- ಭಿರಡಿಯಲ್ಲಿ ವೃಕ್ಷ ಸಂಕಲ್ಪ ಕಾರ್ಯಕ್ರಮ
ರಾಯಬಾಗ: ಫಲವತ್ತಾದ ಭೂಮಿ, ಗಿಡ-ಮರ ಉಳಿದರೆ ಮಾತ್ರ ಮನುಷ್ಯ ಶುದ್ಧ ವಾತಾವರಣದಲ್ಲಿ ಜೀವಿಸಲು ಸಾಧ್ಯ ಎಂದು ಚಿಂಚಣಿ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಶಿವಪ್ರಸಾದ ದೇವರು ಹೇಳಿದರು.
ಭಿರಡಿ ಗ್ರಾಮದಲ್ಲಿ ಕೃಷಿ ಇಲಾಖೆ, ಹುಬ್ಬಳ್ಳಿ ಪಾರಾದೀಪ್ ಫಾಸೇಟ್ಸ್, ಜುವಾರಿ ಫಾರ್ಮ್ ಹರ್ಬ್, ಭಿರಡಿಯ ವೀರಭದ್ರೇಶ್ವರ ಫರ್ಟಿಲೈಸರ್ ಸಹಯೋಗದಲ್ಲಿ `ಹಸಿರು ಗ್ರಾಮ, ಆರೋಗ್ಯವಂತ ಜನರು, ಸಮೃದ್ಧ ಬದುಕು' ಶೀರ್ಷಿಕೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ವೃಕ್ಷ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ಈಚೆಗೆ ಸೇವಿಸುವ ಆಹಾರ ವಿಷಯುಕ್ತವಾಗಿದ್ದು, ರೈತರು ಸಾವಯವ ಕೃಷಿಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಕೈಜೋಡಿಸಬೇಕು. ಗ್ರಾಮದಲ್ಲಿ ಸಸಿ ನೆಟ್ಟು ವೃಕ್ಷ ಸಂಕಲ್ಪ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದ ಸಿದ್ಧಿವಿನಾಯಕ ದೇವಸ್ಥಾನ ಮತ್ತು ಲಕ್ಕಮ್ಮದೇವಿ ದೇವಸ್ಥಾನ ಆವರಣದಲ್ಲಿ ವಿವಿಧ ತಳಿ ಸಸಿ ನೆಡಲಾಯಿತು.
ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ, ಹುಬ್ಬಳ್ಳಿಯ ಪಿಪಿಎಲ್ ಮಹಾಪ್ರಬಂಧಕ ಗಣೇಶ ಹೆಗಡೆ, ಸ್ವಯಂಪ್ರಕಾಶ ಚೌಧರಿ, ಸತೀಶ ಆರ್., ಎಚ್.ಎಂ.ಮಹೇಶ್ವರ, ಮಹಾದೇವ ಬೋರಗಾಂವೆ, ಶರಣಬಸು ಕೆಂಭಾವಿ, ಗಜರಾಜ ಭಾಂಡೇಕರ, ಮಂಜುನಾಥ ಕಳಸನ್ನವರ, ಶಂಕರ ಗಡ್ಕರಿ, ಶಂಕರ ಶಿರಗಾಂವೆ, ಮುರುಘೇಂದ್ರ ನಿಶಾನದಾರ, ಶಂಕರ ನಿಡೋಣಿ, ಶಿವಪ್ಪ ಭೆಂಡೆ, ರವೀಂದ್ರ ನಿಡೋಣಿ, ವಿರೂಪಾಕ್ಷ ಗಳತಗೆ, ಶ್ರೀಶೈಲ ಮಿರ್ಜೆ, ಪಿರಪ್ಪ ಕುಡಚೆ, ಭೀಮಾ ನಿಡೋಣಿ, ರಾಜು ಹಿಪ್ಪರಗಿ ಇತರರಿದ್ದರು.