ಕಡೋಲಿ ಶಾಲೆಯಲ್ಲಿ ನಾಥಾಜಿರಾವ ಜಿ.ಹಲಗೇಕರ ದಂತ ವಿಜ್ಞಾನ ಸಂಸ್ಥೆಯಿಂದ ಏರ್ಪಡಿಸಿದ್ದ ಶಿಬಿರದಲ್ಲಿ ಚಿತ್ರಕಲೆ ಮೂಲಕ ವೈದ್ಯರಿಗೆ ಗೌರವ ಸಲ್ಲಿಸಿದ ವಿದ್ಯಾರ್ಥಿಗಳು. ಡಾ.ಪ್ರೀತಿ ಕುಸಗಲ, ಡಾ.ರೇಖಾ ಎಸ್.ವಿ., ಡಾ.ಸುಷ್ಮಾ ಅಂಗಡಿ, ಸ್ನೇಹಲತಾ ಮಾನೆ ಇತರರಿದ್ದರು.
ಬೆಳಗಾವಿ: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಮರಾಠಾ ಮಂಡಳದ ನಾಥಾಜಿರಾವ ಜಿ.ಹಲಗೇಕರ ದಂತ ವಿಜ್ಞಾನ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಆರೋಗ್ಯ ದಂತವೈದ್ಯಕೀಯ ವಿಭಾಗದ ಕಡೋಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ದಂತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಈ ಆಚರಣೆಯ ಭಾಗವಾಗಿ ‘ವೈದ್ಯರು: ನಮ್ಮ ದೈನಂದಿನ ನಾಯಕರು’ ಎಂಬ ವಿಷಯದ ಮೇಲೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿಯ ಬಗ್ಗೆ ಕೃತಜ್ಞತೆ ಮತ್ತು ಗೌರವ ವ್ಯಕ್ತಪಡಿಸುವ ಚಿತ್ರಗಳ ಮೂಲಕ ತಮ್ಮ ಸೃಜನಶೀಲತೆ ಉತ್ಸಾಹದಿಂದ ಪ್ರದರ್ಶಿಸಿದರು.
ಶಿಬಿರದಲ್ಲಿ ಒಟ್ಟು 140 ವಿದ್ಯಾರ್ಥಿಗಳನ್ನು ತಪಾಸಿಸಲಾಯಿತು. ಪ್ರಾಚಾರ್ಯ ಡಾ.ಪ್ರೀತಿ ಕುಸಗಲ, ಡಾ.ರೇಖಾ ಎಸ್.ವಿ., ಡಾ.ಸುಷ್ಮಾ ಅಂಗಡಿ, ಸ್ನೇಹಲತಾ ಮಾನೆ ಇತರರಿದ್ದರು.