ಬೆಳಗಾವಿಯಲ್ಲಿ ಶುಕ್ರವಾರ ಅಂಗನವಾಡಿ ಹಾಗೂ ಬಿಸಿಯೂಟ ನೌಕರರು ಪ್ರತಿಭಟಿಸಿದರು. ತುಳಸಮ್ಮ ಮಾಳದಕರ, ಪಾರ್ವತಿ ಕೌಜಲಗಿ, ರಾಚಮ್ಮ ರಾಮದುರ್ಗ, ಭಾರತಿ ಜೋಗನ್ನವರ ಇತರರಿದ್ದರು. 
ಬೆಳಗಾವಿ

ಐಸಿಡಿಎಸ್ ಯೋಜನೆ ಬಲಪಡಿಸಲು ಆಗ್ರಹ

ಬೆಳಗಾವಿ
ಐಸಿಡಿಎಸ್ ಯೋಜನೆ ಬಲಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಅಂಗನವಾಡಿ ಮತ್ತು ಬಿಸಿಯೂಟದ ನೌಕರರು ಐಸಿಡಿಎಸ್ ಯೋಜನೆಗೆ ಸಮರ್ಪಕ ಅನುದಾನ ನೀಡಬೇಕು. ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಕೈಬಿಡಬೇಕು. ಗುಣಮಟ್ಟದ ಮೊಬೈಲ್ ಮತ್ತು ಡೇಟಾ ಸೌಲಭ್ಯ ಒದಗಿಸದೆ ಎಫ್‌ಆರ್‌ಎಸ್, ಇ-ಕೆವೈಸಿ, ಪೋಷಣ ಟ್ರ್ಯಾಕರ್‌ಗಳ ಆನ್‌ಲೈನ್ ಕೆಲಸ ಕಡ್ಡಾಯಗೊಳಿಬಾರದು ಹಾಗೂ ಜನಗಣತಿ ಹಾಗೂ ಬಿಎಲ್‌ಒ ಕೆಲಸಗಳ ಹೆಚ್ಚುವರಿ ಹೊರೆ ಬೇಡ ಎಂದು ಕೇಳಿಕೊಂಡರು.
ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದನ್ನು ನಿಲ್ಲಿಸಿ, ನೌಕರರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರನ್ನು ನೇಮಿಸಬೇಕು. ನಿವೃತ್ತ ನೌಕರರಿಗೆ ಇಡಗಂಟು ಮೊತ್ತ ಹಾಗೂ ಮಾಸಿಕ 10 ಸಾವಿರ ರೂ. ಪಿಂಚಣಿ, 12 ತಿಂಗಳಿಗೂ ಕನಿಷ್ಠ ವೇತನ, ಕೆಲಸದ ಸ್ಥಳದಲ್ಲಿ ಮೃತಪಟ್ಟರೆ 25 ಲಕ್ಷ ರೂ. ಪರಿಹಾರ, ಅನುಕಂಪದ ನೇಮಕಾತಿ ಒದಗಿಸಬೇಕು ಎಂದು ಮನವಿ ಮಾಡಿದರು.
ಎಲ್.ಎಸ್.ನಾಯಕ, ಜಿ.ಎಂ.ಜೈನೆಖಾನ್, ತುಳಸಮ್ಮ ಮಾಳದಕರ, ಪಾರ್ವತಿ ಕೌಜಲಗಿ, ರಾಚಮ್ಮ ರಾಮದುರ್ಗ, ಮಾಸಾಬಿ ಡಾಲಾಯತ, ವಿತ್ರಿ ಚಪ್ಪರದ, ಸುನಿತಾ ಚಳವುವರ, ಭಾರತಿ ಜೋಗನ್ನವರ ಇತರರಿದ್ದರು.