ಚಿಕ್ಕೋಡಿ ಮಾರುಕಟ್ಟೆಯಲ್ಲಿ ರೈತರಿಂದ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ರೈತಸಂಘ, ಹಸಿರುಸೇನೆ ಪದಾಧಿಕಾರಿಗಳು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಅವರನ್ನು ಭೇಟಿಯಾಗಿ ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದರು. ಲಕ್ಷ್ಮಣ ಶಿರಡೋಣಿ, ಪಿಂಟು ದಿನ್ನಿಮನಿ, ಬಸವಂತ ಮಾಂಜರೆ ಇತರರಿದ್ದರು.
ಪಟ್ಟಣದಲ್ಲಿ ಗಾಂಧಿ ಮಾರುಕಟ್ಟೆಯಲ್ಲಿ ಬೆಳೆ ಮಾರಾಟಕ್ಕೆಂದು ಬರುವ ರೈತರಿಂದ ಜಕಾತಿ ಸಂಗ್ರಹಿಸುವ ಗುತ್ತಿಗೆದಾರರು ಮನಬಂದಂತೆ ಹಣವಸೂಲಿ ಮಾಡುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ. ಪ್ರತಿ ಡಾಗಕ್ಕೆ 4.ರೂ ಸಂಗ್ರಹ ಮಾಡುತ್ತಿದ್ದು, ಡಾಗ ಖರೀದಿಸಿ ಮರುಮಾರಾಟ ಮಾಡುವ ವ್ಯಕ್ತಿಯಿಂದ 30ರಿಂದ 50 ರೂ. ಹಣ ಪಡೆಯುತ್ತಿದ್ದಾರೆ. ರೈತರಿಂದ ಜಕಾತಿ ಸಂಗ್ರಹ ಮಾಡುವುದನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕನಿಷ್ಠ ದರಪಟ್ಟಿಯನ್ನು ಮಾರುಕಟ್ಟೆಯಲ್ಲಿ ಹಾಕಲಾಗುವುದು. ದರಪಟ್ಟಿಗಿಂತ ಹೆಚ್ಚು ಹಣ ಗುತ್ತಿಗೆದಾರರರಿಗೆ ನೀಡುವ ಅವಶ್ಯಕತೆ ಇಲ್ಲ. ಹೆಚ್ಚು ಹಣ ಸಂಗ್ರಹಕ್ಕೆ ಮುಂದಾದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಲಕ್ಷ್ಮಣ ಶಿರಡೋಣಿ, ಪಿಂಟು ದಿನ್ನಿಮನಿ, ಬಸವಂತ ಮಾಂಜರೆ, ಕುಮಾರ ಮಾಂಜರೆ, ರಫೀಕ್ ಪಠಾಣ, ಭೀಮಸೇನ ಅರಭಾವಿ, ಮಲ್ಲಪ್ಪ ಮಾಂಜರೆ ಇತರರಿದ್ದರು.