ಬೈಲಹೊಂಗಲ ನಗರದಲ್ಲಿ ನಿರ್ಮಾಣವಾಗುತ್ತಿರುವ ಬಾರ್-ರೆಸ್ಟೋರೆಂಟ್ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹಿಸಿ ಸಾರ್ವಜನಿಕರು ತಹಸೀಲ್ದಾರ್ ಹನುಮಂತ ಶಿರಹಟ್ಟಿಗೆ ಮನವಿ ಸಲ್ಲಿಸಿದರು. ಬಸವರಾಜ ಜನ್ಮಟ್ಟಿ, ವಿಜಯ ಬೋಳನ್ನವರ, ಅನಿಲ ಮೆಟಗುಡ್ಡ, ರಾಜೇಂದ್ರ ಸಂಗೊಳ್ಳಿ ಇತರರಿದ್ದರು. 
ಬೆಳಗಾವಿ

ಬಾರ್ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹ

ರಾಘವೇಂದ್ರಗೌಡ ಭೀ ಪಾಟೀಲ್
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ವಿಜಯ ಬೋಳನ್ನವರ ಮಾತನಾಡಿ, ಮೃತ್ಯುಂಜಯ ನಗರ ಜನವಸತಿ ಪ್ರದೇಶವಾಗಿದೆ. ಪ್ರತಿದಿನ ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ದೈನಂದಿನ ಕಾರ್ಯಗಳಿಗೆ ತೆರಳುವ ಮಹಿಳೆಯರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಹೀಗಾಗಿ, ಈ ಪ್ರದೇಶದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಆರಂಭಿಸಿದರೆ ನಿವಾಸಿಗಳ ನೆಮ್ಮದಿ ಹಾಗೂ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಅನಿಲ ಮೆಟಗುಡ್ಡ, ರಾಜೇಂದ್ರ ಸಂಗೊಳ್ಳಿ ಮಾತನಾಡಿ, ಬಾರ್ ಪ್ರಾರಂಭವಾದರೆ ಅನಗತ್ಯ ಜಗಳ-ಗಲಾಟೆ, ಸಂಚಾರ ಸಿಕ್ಕು ಉಂಟಾಗಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಓಡಾಡಲು ತೊಂದರೆಯಾಗುತ್ತದೆ. ಈಗಾಗಲೇ ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದ್ದರೂ, ಕಟ್ಟಡ ಕಾಮಗಾರಿ ಮುಂದುವರಿದಿದೆ. ಕೂಡಲೇ ಬಾರ್-ರೆಸ್ಟೋರೆಂಟ್ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.