ಕುಡಚಿ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಡಾ.ಶಿವಲಿಂಗೇಶ್ವರ ಸ್ವಾಮೀಜಿ, ಕುತುಬುದ್ದೀನ್ ಖಾಜಿ, ಅಮಿನ್ ವಾಟೆ, ಮುಷ್ತಾಕ್ ಬಾಕ್‌ಶಿರಾಜ್ ಇತರರಿದ್ದರು.
ಕುಡಚಿ: ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿ ಆರಂಭ ಹಾಗೂ ಕುಡಚಿ ನಿಲ್ದಾಣದಲ್ಲಿ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ನೇತೃತ್ವದಲ್ಲಿ ಗುರುವಾರ ಆರಂಭವಾದ ಪ್ರತಿಭಟನೆಗೆ ನಿಡಸೋಸಿಯ ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
ಕುಡಚಿ ರೈಲು ನಿಲ್ದಾಣವನ್ನು ಅಮೃತ ಭಾರತ ಯೋಜನೆಯಡಿ ಅಭಿವೃದ್ಧಿಪಡಿಸಬೇಕು. ಆವರಣದಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕು, ಎಲ್ಲ ಎಕ್ಸ್ಪ್ರೆಸ್ ರೈಲುಗಳಿಗೆ ಕುಡಚಿ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು, ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೋರಾಟಗಾರು ಆಗ್ರಹಿಸಿದರು.
ಸುಭಾಸ ಶಿರಬೂರ, ಶ್ರೀಶೈಲ ದರೂರೆ, ಪ್ರಸಾದ ಶಿಂಗೆ, ರಾಜು ನಿಡಗುಂದೆ, ಸಂಜೀವ ಬ್ಯಾಕುಡೆ, ಕಿರಣ ಬೇಡಿ, ಅಮಿನ್ ವಾಟೆ, ಮುಷ್ತಾಕ್ ಭಾಕಶಿರಾಜ್, ಸಾಕೀಫ್ ಪಾಳೇಗಾರ, ಮುಷ್ಪಿಕ್ ಜಿನ್ನಾಬಡೆ, ಆತೀಫ್ ಪಟಾಯಿತ, ಮೌಸೀನ್ ರೋಹಿಲೆ, ಇಜಾಜ್ ಬಿಚ್ಛು, ಅನ್ವರ್ ಚಮನ್‌ಶೇಖ್ ಇತರರಿದ್ದರು.