ಸಿಸಿ ಕ್ಯಾಮರಾ ಸ್ಥಳಾಂತರಿಸುವಂತೆ ಆಗ್ರಹಿಸಿ ಎಎಸ್‌ಐಗೆ ಎಂ.ಕೆ.ಹುಬ್ಬಳ್ಳಿ ದಸಂಸ ಪದಾಧಿಕಾರಿಗಳು ಹಾಗೂ ರೈತರು ಮನವಿ ಸಲ್ಲಿಸಿದರು. ರಾಜಶೇಖರ ಹಿಂಡಲಗಿ, ಭೀಮಪ್ಪ ಗುಡೆನ್ನವರ ಇತರರಿದ್ದರು. 
ಬೆಳಗಾವಿ

ಸಿಸಿ ಕ್ಯಾಮರಾ ಸ್ಥಳಾಂತರಿಸಲು ಆಗ್ರಹ

ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಹೆಚ್ಚಾಗಿ ರೈತಾಪಿ ಕುಟುಂಬಗಳಿರುವುದರಿಂದ ರೈತರು ಇದೇ ಮಾರ್ಗವಾಗಿ ಕೃಷಿ ಜಮೀನುಗಳಿಗೆ ತೆರಳುತ್ತಾರೆ. ಬ್ಯಾಂಕ್ ಸೇರಿ ಅಗತ್ಯ ದಿನಸಿ ಸಾಮಗ್ರಿಗಳನ್ನು ತರಲು ಹೆಚ್ಚಿನ ಜನರು ಇದೇ ಮಾರ್ಗ ಬಳಸುತ್ತಾರೆ. ಇಲ್ಲಿ ಎಐ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಬಹತೇಕ ರೈತರು ಮತ್ತು ಸ್ಥಳೀಯ ನಿವಾಸಿಗಳು ಸಾರಿಗೆ ನಿಮಯ ಪಾಲಿಸುತ್ತಿಲ್ಲ. ಹೆಲ್ಮೆಟ್ ಹಾಕಿಲ್ಲವೆಂಬ ಕಾರಣ ನೀಡಿ ದಂಡದ ನೊಟೀಸ್ ಬರುತ್ತಿವೆ.
ಇದರಿಂದ ಸ್ಥಳೀಯರಿಗೆ ಮತ್ತು ರೈತರಿಗೆ ತೊಂದರೆಯಾಗಿದ್ದು, ತಕ್ಷಣ ದಂಡ ಹಾಕುವುದನ್ನು ಸ್ಥಗಿತಗೊಳಿಸಿ, ರೈತರಿಗೆ ಹಾಗೂ ಸ್ಥಳೀಯರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ಉಪಪೊಲೀಸ್ ಠಾಣೆ ಎಎಸ್‌ಐಗೆ ಸಮಿತಿ ಪದಾಧಿಕಾರಿಗಳು, ರೈತರು ಮತ್ತು ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ರಾಜಶೇಖರ ಹಿಂಡಲಗಿ, ಭೀಮಪ್ಪ ಗುಡೆನ್ನವರ, ರುದ್ರಪ್ಪ ಕೊಡ್ಲಿ, ಅದೃಶ್ಯಪ್ಪ ಹಿಂಡಲಗಿ, ಬಾಳಪ್ಪ ಪಾಗಾದ, ಮುಷ್ತಾಕ್ ಸಾಹೇಬಖಾನ್, ಮುಜಾಹೀದ್ ಕುದ್ರಿ, ರಂಗನಾಥ ಚಲವಾದಿ, ಕಾರ್ತಿಕ ತಳವಾರ, ಬಸವರಾಜ ಮಾದರ, ದಾದಾಪೀರ್ ಸವದತ್ತಿ, ಜ್ಯೋತಿಬಾ ಪಾಗಾದ ಇತರರಿದ್ದರು.