ಸವದತ್ತಿ ಜಾಕ್ವೆಲ್ ಬಳಿ ಚುಳಕಿ, ಚಿಕ್ಕುಂಬಿ, ಹಂಚಿನಾಳ ಹಾಗೂ ವಿವಿಧ ಗ್ರಾಮಗಳ ರೈತರು ಪ್ರತಿಭಟಿಸಿದರು. ಶಂಕರಪ್ಪ ತೋರಗಲ್ಲ, ಶ್ರೀಕಾಂತ ಹಟ್ಟಿಹೊಳಿ,ಶಂಕರ ಮಾಗುಂಡ ಇತರರಿದ್ದರು.
- ಸವದತ್ತಿ ಜಾಕ್ವೆಲ್ ಬಳಿ ರೈತರ ಪ್ರತಿಭಟನೆ
- ಸ್ಥಳಕ್ಕೆ ಅಧಿಕಾರಿಗಳ ದೌಡು
ಮಲಪ್ರಭಾ ಬಲದಂಡೆ ಕಾಲುವೆಗೆ ಕುಡಿಯುವ ನೀರು ಹರಿಸುವಂತೆ ಆಗ್ರಹಿಸಿ ಸವದತ್ತಿ, ನರಗುಂದ, ನವಲಗುಂದ ಸೇರಿದಂತೆ ವಿವಿಧ
ಗ್ರಾಮಗಳ ರೈತರು ಜಾಕ್ವೆಲ್ ಬಳಿ ಗುರುವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಬಲದಂಡೆ ಕಾಲುವೆ ಮೂಲಕ ಎರಡು ಟಿಎಂಸಿ ನೀರು ಹರಿಸುವಂತೆ ಜು.29ರಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು 2-3 ದಿನಗಳಲ್ಲಿ ನೀರು ಹರಿಸುವುದಾಗಿ ನೀಡಿದ್ದ ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಗೊಂಡಿದ್ದೇವೆ ಎಂದು ರೈತರು ಹೇಳಿದರು.
ಮುಖಂಡರಾದ ಹನುಮಂತ ಕರ್ಲವಾಡ ಹಾಗೂ ಗಿರೀಶ ಬಿಮರಡ್ಡಿ ಮಾತನಾಡಿ, ಕಾಲುವೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಕೆರೆ-ಕಟ್ಟೆಗಳು ಬತ್ತುತ್ತಿವೆ. ಅಲ್ಲದೆ, ಹಂಚಿನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಮಸ್ಯೆ ಉಲ್ಬಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಮನೋಹರ ಬಿಸ್ನಾಳ ಹಾಗೂ ಪಿಐ ಸುರೇಶ ಬೆಂಡೆಗುಂಬಳ ರೈತರೊಂದಿಗೆ ಮಾತುಕತೆ ನಡೆಸಿ ಆ.20ರ ಬಳಿಕ ಕಾಲುವೆಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಶಂಕರಪ್ಪ ತೋರಗಲ್ಲ, ಶ್ರೀಕಾಂತ ಹಟ್ಟಿಹೊಳಿ,
ಎ್.ಎಂ.ನದ್ಾ, ಶಂಕರ ಮಾಗುಂಡ, ಶಿವನಗೌಡ ಪಾಟೀಲ, ಈರಯ್ಯ ಮಠಪತಿ, ನಿಂಗಪ್ಪ ತಪ್ಪಲದ, ಹನುಮಂತ ಸೊಪ್ಪಡ್ಲ, ಬಸವನಗೌಡ ಮುದೇನಕೊಪ್ಪ, ಮಾರುತಿ ಹಂಜಿಬೆಟ್ಟಿ, ಮಲ್ಲಿಕಾರ್ಜುನ ಕರಿ, ಶಬ್ಬೀರ್ ಜಮಾದಾರ, ಅಶೋಕ ಕರಿ, ಪುಂಡಲೀಕ ಬೋವನ್ನವರ, ಗೋವಿಂದಪ್ಪ ಶ್ರೀಹರಿ, ಪ್ರಕಾಶ ಬದ್ನೂರ ಇತರರಿದ್ದರು.