ಹಾರೂಗೇರಿ ತಾಲೂಕು ಘೋಷಣೆ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ಮಹಾದೇವ ಸನಮುರಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ವಸಂತ ಲಾಳಿ, ಜಿನ್ನಪ್ಪ ಅಸ್ಕಿ, ಡಾ.ಎಲ್.ಎಸ್.ಜಂಬಗಿ, ಡಾ.ವಿ.ಎಸ್.ಮಾಳಿ, ಎನ್.ಎಸ್.ಚೌಗಲಾ ಇತರರಿದ್ದರು.
ಹಾರೂಗೇರಿ: ಪಟ್ಟಣವನ್ನು ತಾಲೂಕಾಗಿ ಘೋಷಿಸುವಂತೆ ಒತ್ತಾಯಿಸಿ ಇಲ್ಲಿನ ನಾಗರಿಕರು ಸ್ವಯಂ ಪ್ರೇರಿತ ಅಂಗಡಿ ಬಂದ್ ಮಾಡಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗುರುವಾರ ತಹಸೀಲ್ದಾರ್ ಮಹಾದೇವ ಸನಮುರಿ ಅವರಿಗೆ ಮನವಿ ಸಲ್ಲಿಸಿದರು.
ಪುರಸಭೆ ಅಧ್ಯಕ್ಷ ವಸಂತ ಲಾಳಿ ಮಾತನಾಡಿ, ರಾಯಬಾಗ ತಾಲೂಕಿನಲ್ಲಿ ದೊಡ್ಡ ಪಟ್ಟಣವಾಗಿರುವ ಹಾರೂಗೇರಿ ಸುತ್ತಮತ್ತಲಿನ ಹಳ್ಳಿಗಳಿಗೆ ಕೇಂದ್ರ ಸ್ಥಾನ. ತಾಲೂಕು ಕೇಂದ್ರವನ್ನಾಗಿಸುವAತೆ ೩೦ ವರ್ಷದಿಂದ ಮನವಿ ಸಲ್ಲಿಸುತ್ತ ಬಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಹಾರೂಗೇರಿ ತಾಲೂಕನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ತಾಲೂಕು ರಚನಾ ಸಮಿತಿ ಅಧ್ಯಕ್ಷ ಜಿನ್ನಪ್ಪ ಅಸ್ಕಿ ಮಾತನಾಡಿ, ಹಾರೂಗೇರಿ ತಾಲೂಕು ಘೋಷಣೆ ಮಾಡುವರೆಗೂ ಹೋರಾಟ ನಿರಂತರ ಮತ್ತು ಅಚಲವಾಗಿರುತ್ತದೆ ಎಂದರು. ಪಂಚಾಯಿತಿಯಲ್ಲಿ ಠರಾವು ಮಾಡಿದ ೨೭ ಹಳ್ಳಿಗಳ ಜನರು ತಾಲೂಕು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಡಾ.ಎಲ್.ಎಸ್.ಜಂಬಗಿ, ಡಾ.ವಿ.ಎಸ್.ಮಾಳಿ, ಎನ್.ಎಸ್.ಚೌಗಲಾ, ಬಿ.ಆರ್.ಆಜೂರ, ಭೀಮು ಬದನಿಕಾಯಿ, ಕಸಾಪ ಅಧ್ಯಕ್ಷ ಈರಣಗೌಡ ಪಾಟೀಲ, ಶ್ರೀಧರ ಮೂಡಲಗಿ, ಸುರೇಶ ಐಹೊಳೆ, ರಾಮಕೃಷ್ಣ ಯಲಶೆಟ್ಟಿ, ಭೀಮಗೌಡ ಕರ್ಣವಾಡಿ, ವಸಂತ ಅಲಖನೂರ, ಮಹೇಶ ಐಹೊಳೆ, ಬುರಾನಸಾಬ್ ಶೇಖ್, ದುಂಡಪ್ಪ ಹಾಡಕಾರ, ತಮ್ಮಾಣಿ ಕುರಿ, ಹರ್ಷದ ಪಠಾಣ ಇತರರು ಇದ್ದರು.