ಬೆಳಗಾವಿ ಪಾಲಿಕೆ ಆವರಣದಲ್ಲಿ ಸೋಮವಾರ ಮೇಯರ್ ಮಂಗೇಶ ಪವಾರ್‌ಗೆ ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು ಮನವಿ ಸಲ್ಲಿಸದರು. ಶಾಸಕ ಆಸೀಫ್ ಸೇಠ್, ಉಪಮೇಯರ್ ವಾಣಿ ಜೋಶಿ ಇತರರಿದ್ದರು. 
ಬೆಳಗಾವಿ

ಮಹಾತ್ಮರ ಪ್ರತಿಮೆ ಸ್ಥಾಪಿಸಲು ಆಗ್ರಹ

ಬೆಳಗಾವಿ: ನಗರದ ಕೋಟೆ ಕೆರೆ ಮಧ್ಯದ ಭಾಗದಲ್ಲಿ ಬುದ್ಧನ ಮೂರ್ತಿ, ರಾಷ್ಟ್ರೀಯ ಹೆದ್ದಾರಿ ಪ್ರವೇಶ ದ್ವಾರದಲ್ಲಿ ಶಾಹು ಮಹಾರಾಜರ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ ಸೋಮವಾರ ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು ಪ್ರತಿಭಟಿಸಿದರು. ನಗರದ ಪ್ರವೇಶಿಸುವ ನಾಲ್ಕೂ ದಿಕ್ಕುಗಳಲ್ಲಿ ಮಹಾತ್ಮರ ಪ್ರತಿಮೆ ಸ್ಥಾಪಿಸಬೇಕು. ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ ಪ್ರವೇಶದಲ್ಲಿ ಶಾಹು ಮಹಾರಾಜ ಪ್ರತಿಮೆ ಸ್ಥಾಪಿಸಬೇಕು. ಇದೇ ವಿಷಯ ಕುರಿತು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಜ.26ರಂದು ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ಪಾಲಿಕೆ ಸದಸ್ಯರು, ಶಾಸಕರು, ಸಚಿವರು, ಅಧಿಕಾರಿಗಳು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂತೋಷ ಕಾಂಬಳೆ, ರವಿ ಬಸ್ತವಾಡ್ಕರ, ಕಲ್ಲಪ್ಪ ರಾಮಚಣ್ಣವರ ಇತರರಿದ್ದರು.