ಸಭೆಯಲ್ಲಿ ಡಾ.ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಸಂಪಾದನಾ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ ಇತರರಿದ್ದರು.
ಚಿಕ್ಕೋಡಿ: ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆ ಸೃಷ್ಟಿಸಬೇಕೆಂಬ ಮೂರು ದಶಕಗಳ ಬೇಡಿಕೆ ಈಡೇರಿಲ್ಲ. ಈಗಲಾದರೂ ಸರ್ಕಾರ ವಿಳಂಬ ಮಾಡದೆ ತಕ್ಷಣ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಬೇಕೆಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಡಾ.ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ಇಲ್ಲಿನ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಚಿಕ್ಕೋಡಿ ಭೌಗೋಳಿಕ, ಕಂದಾಯ ದೃಷ್ಟಿಯಿಂದ ಜಿಲ್ಲೆಯಾಗಬೇಕಿದ್ದು, ಈಗಾಗಲೇ ಜಿಲ್ಲಾಮಟ್ಟದ ಹಲವು ಕಚೇರಿಗಳು ಕಾರ್ಯರ್ನಿಹಿಸುತ್ತಿರುವುದರಿಂದ ಚಳಿಗಾಲದ ವಿಧಾನಸಭೆ ಅಽವೇಶನದಲ್ಲಿ ಜಿಲ್ಲೆ ಸೃಜಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರೊ.ಎಸ್.ವೈ.ಹಂಜಿ ಮಾತನಾಡಿ, ಕರ್ನಾಟಕ ನಿರ್ಮಾಣದಲ್ಲಿ ಉತ್ತರ ಕರ್ನಾಟಕದ ಕೊಡುಗೆ ಅಪಾರ. ಆದರೆ, ಇಂದು ಅಭಿವೃದ್ಧಿಯಲ್ಲಿ ಉಕ ಅನ್ಯಾಯವಾಗುತ್ತಿದೆ. ಚಿಕ್ಕೋಡಿ ಜಿಲ್ಲೆ ರಚನೆಗೆ ಜನಪ್ರತಿನಿಽಗಳು ಶ್ರಮಿಸಬೇಕು ಎಂದು ಆಗ್ರಹಿಸಿದರು.
ಸಂಪಾದನಾ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಬೆಲ್ಲದ ಬಾಗೇವಾಡಿಯ ಶಿವಾನಂದ ಸ್ವಾಮೀಜಿ, ಬೆಂಡವಾಡದ ಗುರುಸಿದ್ಧ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ, ಶರಣಬಸವ ದೇವರು, ಗುರುದೇವ ದೇವರು, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ರೇವಣಸಿದ್ಧೇಶ್ವರ ಸ್ವಾಮೀಜಿ, ರುದ್ರಪ್ಪ ಸಂಗಪ್ಪಗೋಳ, ಸುರೇಶ ಬ್ಯಾಕೂಡೆ, ನಾಗೇಶ ಮಾಳಿ, ರೇವಪ್ಪ ತಳವಾರ, ರಮೇಶ ಬಸ್ತವಾಡೆ, ಅಜಿತ ಸಂಗ್ರೊಳ್ಳೆ, ರಾಮಕೃಷ್ಣ ಪಾನಬುಡೆ ಇತರರಿದ್ದರು.