ಯರಗಟ್ಟಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ರುದ್ರಭೂಮಿ ಜಾಗ ಅತಿಕ್ರಮಿಸಲಾಗಿದ್ದು, ತೆರವುಗೊಳಿಸುವಂತೆ ಆಗ್ರಹಿಸಿ ವೀರಶೈವ- ಲಿಂಗಾಯತ ಸಮುದಾಯದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳಗೆ ಮನವಿ ಸಲ್ಲಿಸಲಾಯಿತು. ಶ್ರೀಶೈಲ ವಾಲಿ, ಬಿ.ಎಂ.ರಾಯರ ಇತರರಿದ್ದರು.
ಸರ್ವೇ ನಂ.765 ರಲ್ಲಿರುವ ರುದ್ರಭೂಮಿ ಜಾಗ ಗುರುತಿಸಿ ಶೀಘ್ರವಾಗಿ ಕಾಂಪೌಂಡ್ ನಿರ್ಮಿಸಬೇಕು. ರುದ್ರಭೂಮಿ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ನಿಲ್ಲಿಸಬೇಕು. ಇಲ್ಲಿ ಪಟ್ಟಣ ಪಂಚಾಯಿತಿ ಕೈಗೊಂಡಿರುವ ಅನವಶ್ಯಕವಾಗಿ ರಸ್ತೆ ಕಾಮಗಾರಿ ಕೈಬಿಡಬೇಕು. ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಶೀಘ್ರವೇ ರುದ್ರಭೂಮಿ ಜಾಗ ಗುರುತಿಸಿ ಕೌಂಪೌಂಡ್ ಹಾಗೂ ಗೇಟ್ ನಿರ್ಮಿಸಲು ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಮುಖಂಡರಾದ ಶ್ರೀಶೈಲ ವಾಲಿ, ಬಿ.ಎಂ.ರಾಯರ, ಎಂ.ಬಿ.ವಾಲಿ, ಶಿದ್ಲಿಂಗಪ್ಪ ಗಲಗಲಿ, ಮಹಾಂತೇಶ ಜಕಾತಿ, ಶಶಿಕಾಂತ ಹಾದಿಮನಿ, ರಾಜೇಂದ್ರ ವಾಲಿ, ಕುಮಾರ ಹಿರೇಮಠ, ವಿರೂಪಾಕ್ಷ ಮದ್ದಾನಿ, ಶಿವಾನಂದ ಯರಗಣವಿ, ವಿರೂಪಾಕ್ಷ ಜಕಾತಿ, ಟಿ.ಎಸ್.ವಾಲಿ, ಮಹಾರುದ್ರಪ್ಪ
ಮಲಶೆಟ್ಟಿ, ಶಿವಾನಂದ ಹಂಜಿ, ಬಸಪ್ಪ ಮಲಶೆಟ್ಟಿ, ದುಂಡಪ್ಪ ಉಪ್ಪಿನ, ಶಿವಾನಂದ ಮದ್ದಾನಿ, ರಾಜು ಕತ್ತಿಶೆಟ್ಟಿ, ಪ್ರವೀಣ ಬೆಣ್ಣಿ ಇತರರಿದ್ದರು.