ಯಕ್ಸಂಬಾ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಚರಂಡಿ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸ್ಥಳೀಯರು ಪಪಂ ಮುಖ್ಯಾಧಿಕಾರಿ ಮಹಾಂತೇಶ ನಿಡೋಣಿಗೆ ಮನವಿ ಸಲ್ಲಿಸಿದರು. ತೋರಪ್ಪ ಮಾಳಗೆ, ಉದಯ ಮುರಾರಿ, ಅಚ್ಯುತ ಕಾಂಬಳೆ, ವಿಜಯ ದೀಕ್ಷಿತ ಇತರರಿದ್ದರು.
ಚಿಕ್ಕೋಡಿ: ತಾಲೂಕಿನ ಯಕ್ಸಂಬಾ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಚರಂಡಿ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಇಲ್ಲಿನ ನಿವಾಸಿಗಳು ಈಚೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಅಂಬೇಡ್ಕರ್ ನಗರದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ಆದರೆ, ಚರಂಡಿ ಇಲ್ಲದೇ ಇರುವುದರಿಂದ ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸ್ವಚ್ಛತಾ ಕಾರ್ಯಗಳು ಆಗುತ್ತಿಲ್ಲ. ಕೂಡಲೇ ಚರಂಡಿ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ತೋರಪ್ಪ ಮಾಳಗೆ, ಉದಯ ಮುರಾರಿ, ಅಚ್ಯುತ ಕಾಂಬಳೆ, ವಿಜಯ ದೀಕ್ಷಿತ, ಕಲ್ಲಪ್ಪ ಕಾಂಬಳೆ ಇತರರಿದ್ದರು.