ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಅಳವಡಿಸಿರುವ ಎಐ ಕ್ಯಾಮರಾ ಸ್ಥಗಿತಗೊಳಿಸಲು ರೈತ ಸಂಘಟನೆ ಪದಾಧಿಕಾರಿಗಳು ಪಿಎಸ್‌ಐಗೆ ಮನವಿ ಸಲ್ಲಿಸಿದರು. ಪ್ರಕಾಶ ನಾಯ್ಕ, ಆಸ್ಮಾ ಜೂಟದಾರ, ಸಮರ್ಥ ಪಾಟೀಲ, ಆನಂದ ಚಳ್ಳಮರದ ಇತರರಿದ್ದರು. 
ಬೆಳಗಾವಿ

ಎಐ ಕ್ಯಾಮರಾ ದಂಡ ತಪ್ಪಿಸಲು ಆಗ್ರಹ

ಪ್ರಶಾಂತ ಹೂಗಾರ

ಎಂ.ಕೆ.ಹುಬ್ಬಳ್ಳಿ: ಎಐ ಕ್ಯಾಮರಾ ದಂಡ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಪಟ್ಟಣದ ಬೈಲಹೊಂಗಲ ರಸ್ತೆಯಲ್ಲಿ ಸಂಚಾರ ತಡೆದು ಪ್ರತಿಭಟಿಸಲಾಯಿತು.

ವಾಹನ ಸವಾರರಿಗೆ ತಲಾ 500 ರೂ.ನಂತೆ ಹಲವು ಬಾರಿ ದಂಡ ಬಿದ್ದಿವೆ. ರೈತರ ಮೇಲೆ ಆರ್ಥಿಕ ಹೊರೆ ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿ ರೈತರು ಆಕ್ರೋಶ ಹೊರಹಾಕಿದರು. ಸುರಕ್ಷತೆಗಾಗಿ ಕ್ಯಾಮರಾ ಅಳವಡಿಸಬೇಕು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಜಮೀನುಗಳಿಗೆ ತೆರಳುವ ರೈತರು ಹಾಗೂ ವಿವಿಧ ಕೆಲಸಗಳಿಗೆ ಓಡಾಡುವ ಸ್ಥಳೀಯರಿಗೆ ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ 500 ದಂಡ ಹಾಕುತ್ತಿರುವುದು ಸರಿಯಲ್ಲ ಎಂದರು. ಮನವಿ ಸ್ವೀಕರಿಸಿದ ಪಿಎಸ್‌ಐ ಭರತ ಎಸ್., ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪಪಂ ಸದಸ್ಯರು, ಮಾಜಿ ಯೋಧರು, ಸ್ಥಳೀಯರು ಬೆಂಬಲ ನೀಡಿದರು.
ರೈತ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ ನಾಯ್ಕ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಸ್ಮಾ ಜೂಟದಾರ, ಜಿಲ್ಲಾ ಕಾರ್ಯದರ್ಶಿ ಸಮರ್ಥ ಪಾಟೀಲ, ಆನಂದ ಚಳ್ಳಮರದ, ಸಿದ್ದು ಜೋತಗನ್ನವರ, ಪಪಂ ಅಧ್ಯಕ್ಷ ಸುರೇಶ ಮುತ್ನಾಳ, ಸದಸ್ಯರಾದ ದೊಡ್ಡಪ್ಪ ಗಣಾಚಾರಿ, ಪ್ರಕಾಶ ಗಿರಜಿಮನಿ, ಮಂಜುನಾಥ ಕಡಕೋಳ, ಪ್ರಕಾಶ ಕೊಡ್ಲಿ, ಸುಭಾನಿ ಅಗಸಿಬಾಗಿಲ, ಸಮೀರ್ ಪಟೇಲ್, ವಿಠ್ಠಲ ಕಡಕೋಳ, ಶಂಕರ ಸುಣಗಾರ ಇತರರಿದ್ದರು.