ಬೆಳಗಾವಿಯಿಂದ ಯಾವುದೇ ವಿಮಾನ ಸೇವೆ ಸ್ಥಗಿತಗೊಳಿಸದಂತೆ ಆಗ್ರಹಿಸಿ ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್‌ರಿಂದ ಕ್ಲಾತ್ ಮರ್ಚೆಂಟ್ಸ್ ಅಸೋಸಿಯೇಷನ್‌ನಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.  
ಬೆಳಗಾವಿ

ವಿಮಾನ ಯಾನ ಸೇವೆ ಸ್ಥಗಿತಗೊಳಿಸದಂತೆ ಆಗ್ರಹ

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಸದ್ಯ ಚಾಲ್ತಿಯಲ್ಲಿರುವ ವಿವಿಧ ನಗರಗಳೊಂದಿಗಿನ ವಿಮಾನಯಾನ ಸಂಪರ್ಕವನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು ಎಂದು ಬೆಳಗಾವಿ ಕ್ಲಾತ್ ಮರ್ಚೆಂಟ್ಸ್ ಅಸೋಸಿಯೇಷನ್ ಮತ್ತು ಟ್ರೇಡರ್ಸ್‌ ಫೋರಂ ಆಗ್ರಹಿಸಿದೆ.
ಜ.15ರಿಂದ ಕೆಲ ವಿಮಾನ ಸೇವೆ ಸ್ಥಗಿತಗೊಳಿಸಲಾಗುತ್ತಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಶುಕ್ರವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಿರ್ದೇಶಕ ಎಸ್.ತ್ಯಾಗರಾಜನ್‌ರೊಂದಿಗೆ ಸಭೆ ನಡೆಸಿ, ಮನವಿ ಸಲ್ಲಿಸಿದರು.
ಚಾಲ್ತಿಯಿರುವ ಯಾವುದೇ ನಗರದೊಂದಿಗಿನ ವಿಮಾನ ಸೇವೆ ಸ್ಥಗಿತಗೊಳಿಸಿದಲ್ಲಿ ಬೆಳಗಾವಿಯ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ತೀವ್ರ ಪೆಟ್ಟು ಬೀಳುತ್ತದೆ. ಯಾವುದೇ ಕಾರಣಕ್ಕೂ ಯಾವ ನಗರದ ಸಂಪರ್ಕವೂ ನಿಲ್ಲಬಾರದು. 2019ರ ಉಡಾನ್ ಯೋಜನೆಯ 13 ಸೆಕ್ಟರ್‌ಗಳ ವಿಮಾನ ಸೇವೆ ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಹೊಸ ಟರ್ಮಿನಲ್ ಕಾರ್ಯದ ಬಗ್ಗೆ ಸೀನಿಯರ್ ಸೂಪರಿಂಟೆಂಡೆಂಟ್ ಸುಭಾಷ ಪಾಟೀಲ ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಸತೀಶ ತೆಂಡೂಲ್ಕರ್, ಕಾರ್ಯದರ್ಶಿ ಮುಖೇಶ ಖೋಡಾ, ಮುಖೇಶ ಸಂಘವಿ, ನಿತೇಶ ಜೈನ, ರಾಜು ಪಾಲಿವಾಲಾ, ಲಾಲ್‌ಚಂದ ಛಾಪ್ರು ಇತರರಿದ್ದರು.