ಕೇಂದ್ರ ಸರ್ಕಾರದ ತುಟ್ಟಿಭತ್ಯೆ ಸ್ಥಗಿತಗೊಳಿಸಬಾರದು ಎಂದು ಆಗ್ರಹಿಸಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಅಖಿಲ ಭಾರತ ನಿವೃತ್ತ ನೌಕರರ ಒಕ್ಕೂಟದ ವತಿಯಿಂದ ಸವದತ್ತಿಯಲ್ಲಿ ಶಿರೆಸ್ತೆದಾರ್ ಶಶಿಧರ ವನಕಿಗೆ ಮನವಿ ಸಲ್ಲಿಸಲಾಯಿತು. ಬಿ.ವಿ.ವಾಂಗೆ ವಿ.ಎನ್.ಮುನವಳ್ಳಿ, ಗಿರೀಶ ಮುನೋಳಿ ಇತರರಿದ್ದರು. 
ಬೆಳಗಾವಿ

ತುಟ್ಟಿಭತ್ಯೆ ಸ್ಥಗಿತಗೊಳಿಸದಿರಲು ಒತ್ತಾಯ

ರಾಘವೇಂದ್ರಗೌಡ ಭೀ ಪಾಟೀಲ್
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ವಿ.ವಾಂಗಿ ಮಾತನಾಡಿ, ಸರ್ಕಾರಿ ನೌಕರರು ಮತ್ತು ಕುಟುಂಬ ಪಿಂಚಣಿದಾರರು ಜೀವನೋಪಾಯಕ್ಕೆ ಅವಶ್ಯವಾಗಿರುವ ತುಟ್ಟಿಭತ್ಯೆ ಸ್ಥಗಿತಗೊಳಿಸುವುದು ನ್ಯಾಯಸಮ್ಮತವಲ್ಲ. ಈ ಕುರಿತು ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಎನ್.ವಿ.ಚಂಚಳ್ಳಿ, ವಿ.ಎನ್.ಮುನವಳ್ಳಿ, ಪಿ.ಎಂ.ಪಯಣವರ, ಎಂ.ಎಂ.ಸಂಘಂ, ಎ.ಎಸ್. ಪಟಗೊಂಡಿ, ಎ.ಬಿ.ಹೊಂಗಲ, .ಟಿ.ಎನ್.ಶೆಲ್ಲಿಕೇರಿ, ಎ.ಎನ್.ಬಜೇರಿ, ಎಸ್.ಎಸ್.ಹಿರೇಮಠ, ಕಿರಣ ಕಪಾಲಿ, ಮಲ್ಲೇಶ ಯಾದವಾಡ ಇತರರಿದ್ದರು.