ಎಂಇಎಸ್ ಮೋರ್ಚಾಗೆ ಅನುಮತಿ ಕೊಡದಿರಲು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ಕರವೇ ಕಾರ್ಯಕರ್ತರು ಪ್ರತಿಭಟಿಸಿದರು. ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಹೊಳೆಪ್ಪ ಸುಲದಾಳ, ಲಗಮಣ್ಣ ಮಾಳಂಗಿ, ಅಡವೆಪ್ಪ ತಲ್ಲೂರಿ, ಸತೀಶ ಗುಡದವರ, ರೂಪಾ ಬಾರಿಗಡ್ಡಿ, ಸಂಗೀತಾ ಕಾಂಬಳೆ ಇತರರಿದ್ದರು.
ಬೆಳಗಾವಿ : ಕನ್ನಡ ಕಡ್ಡಾಯ ವಿರೋಧಿಸಿ ಜೂ.22ರಂದು ಮೋರ್ಚಾ ಮಾಡಲು ಮುಂದಾಗಿರುವ ಎಂಎಸ್‌ಎಗೆ ಜಿಲ್ಲಾಡಳಿತ ಅನುಮತಿ ಕೊಟ್ಟಲ್ಲಿ, ಅದೇ ದಿನ ಬೆಳಗಾವಿಯಲ್ಲಿ ‘ಕನ್ನಡವೇ ಸಾರ್ವಭೌಮ’ ಹೆಸರಿನಲ್ಲಿ ಸ್ವಾಭಿಮಾನ ರ‌್ಯಾಲಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಎಚ್ಚರಿಕೆ ನೀಡಿದೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಕರವೇ ಕಾರ್ಯಕರ್ತರು, ಮೋರ್ಚಾ ಮಾಡುವುದಾಗಿ ಎಂಇಎಸ್ ಘೋಷಿಸಿದೆ. ಇದಕ್ಕೆ ಜಿಲ್ಲಾಡಳಿತ ರಾಜಕೀಯ ಒತ್ತಡಕ್ಕೆ ಮಣಿದು ಅನುಮತಿ ಕೊಡಬಾರದು. ಒಂದು ವೇಳೆ ಅನುಮತಿ ಕೊಟ್ಟರೆ ಆ ದಿನ ರಾಜ್ಯದ ಎಲ್ಲ ಜಿಲ್ಲೆಗಳಿಂದ ಕರವೇ ಕಾರ್ಯಕರ್ತರು ಆಗಮಿಸಿ ಸ್ವಾಭಿಮಾನಿ ರ‌್ಯಾಲಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಎಚ್ಚರಿಸಿದ್ದಾರೆ.
ಕಳೆದ ಐದು ದಶಕಗಳಿಂದ ಗಡಿಭಾಗದ ಬೆಳಗಾವಿಯಲ್ಲಿ ಭಾಷಾ ರಾಜಕಾರಣ ಮಾಡಿ, ಮರಾಠಿ ಭಾಷಿಕರನ್ನು ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರ ವಿರುದ್ಧ ಎತ್ತಿಕಟ್ಟುತ್ತ ಬಂದಿರುವ ನಾಡದ್ರೋಹಿ ಎಂಇಎಸ್ ನಾಯಕರು ಪುನಃ ಬೆಳಗಾವಿಯ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಇವರನ್ನು ಮುಂಜಾತ್ರಗಾ ಕ್ರಮವಾಗಿ ಬಂಧಿಸಿ, ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಹೊಳೆಪ್ಪ ಸುಲದಾಳ, ಲಗಮಣ್ಣ ಮಾಳಂಗಿ, ಅಡವೆಪ್ಪ ತಲ್ಲೂರಿ, ಸತೀಶ ಗುಡದವರ, ಮಂಜುನಾಥ ರಾಠೋಡ, ಲೋಕೆಶ ರಾಠೋಡ, ಅರ್ಜುನ ಕಾಂಬಳೆ, ಇಸ್ಮಾಯಿಲ್ ಮುಲ್ಲಾ, ಅಭಿಷೇಕ ಅಗಸಗಿ, ಶ್ರೀಧರ ಹೊಳ್ಳೆನವರ, ಗಿರೀಶ ಪಾಟೀಲ, ರಮೇಶ್ ಯರಗಣ್ಣವರ, ಬಸವರಾಜ ದಂಡನವರ, ರೂಪಾ ಬಾರಿಗಡ್ಡಿ, ಸಂಗೀತಾ ಕಾಂಬಳೆ ಇತರರಿದ್ದರು.