ಮನರೇಗಾ ಯೋಜನೆ ಹೆಸರು ಬದಲಿಸದಂತೆ ಒತ್ತಾಯಿಸಿ ಗೋಟೂರ ಗ್ರಾಮದ ಕೂಲಿಕಾರ್ಮಿಕರು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಹನುಮಂತ ಶೇಖನವರ, ಸಚಿನ ಮನ್ನಿಕೇರಿ, ರವಿಂದ್ರ ಮಾಸೇವಾಡಿ, ಗುರುನಾಥ ಶಿಂಧೆ ಇತರರಿದ್ದರು. 
ಬೆಳಗಾವಿ

ಮನರೇಗಾ ಹೆಸರು ಬದಲಿಸದಿರಲು ಆಗ್ರಹ

ಸಂಕೇಶ್ವರ: ಮನರೇಗಾ ಹೆಸರನ್ನು ಬದಲಾಯಿಸದಂತೆ ಒತ್ತಾಯಿಸಿ ಸಮೀಪದ ಗೋಟೂರ ಗ್ರಾಮದ ನರೇಗಾ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಿ, ಯೋಜನೆಯನ್ನು ಮೊದಲಿನಂತೆಯೇ ಮುಂದುವರಿಸುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಈಚೆಗೆ ಮನವಿ ಸಲ್ಲಿಸಿದರು. 
ಕೇಂದ್ರ ಸರ್ಕಾರ ಮನರೇಗಾ ಯೋಜನೆಗೆ ತಿದ್ದುಪಡಿ ಮಾಡಿ, ಮಾನವ ದಿನಗಳನ್ನು ಕೇಂದ್ರ ಸರ್ಕಾರ ಸೂಚಿಸದಂತೆ ಸೃಜಿಸಬೇಕು, ಕೂಲಿಕಾರ್ಮಿಕರ ವೇತನ ಮತ್ತು ಸಾಮಗ್ರಿಗಳಿಗಾಗಿ ರಾಜ್ಯ ಹಾಗೂ ಕೇಂದ್ರಗಳ ಪ್ರಮಾಣಿತ ಹಂಚಿಕೆ ಬದಲಿಸಲಾಗಿದೆ. ಕೆಲಸದ ಸಮಯಕ್ಕೆ ನಿರ್ಬಂಧ ಹೇರಲಾಗಿದೆ. ಈ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಮೂಲ ಸ್ವರೂಪ ಬದಲಾಯಿಸಲಾಗಿದೆ. ಆದ್ದರಿಂದ ಮೊದಲಿನಂತೆಯೇ ಯೋಜನೆ ಮುಂದುವರಿಸುವಂತೆ ಒತ್ತಾಯಿಸಿದರು. 
ಹನುಮಂತ ಶೇಖನವರ, ಸಚಿನ ಮನ್ನಿಕೇರಿ, ರವಿಂದ್ರ ಮಾಸೇವಾಡಿ, ಗುರುನಾಥ ಶಿಂಧೆ, ರಾಜು ನಾಯಿಕ, ಯಶವಂತ ಹತ್ತರಗಿ ಇತರರಿದ್ದರು.