ಬೆಳಗಾವಿ ತಾಪಂ ಎದುರು ಶುಕ್ರವಾರ ಮನರೇಗಾ ಕಾಯಿದೆ ಮುಂದುವರೆಸುವಂತೆ ಆಗ್ರಹಿಸಿ ಪ್ರತಿಭಟಿಸಲಾಯಿತು.
ಬೆಳಗಾವಿ : ನರೇಗಾ ಹೆಸರು ಬದಲಾವಣೆ ಹಾಗೂ ತಿದ್ದುಪಡಿ ಮಸೂದೆಯನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ನಗರದ ತಾಲೂಕು ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಗ್ರಾಮೀಣ ಕೂಲಿಕಾರ ಕಾರ್ಮಿಕರ ಸಂಘದಿಂದ ಒಂದು ದಿನದ ಸಾಂಕೇತಿಕ ಧರಣಿ ಕೈಗೊಳ್ಳಲಾಯಿತು.
ಮನರೇಗಾ ಉಳಿಸಿ ಅಂದೋಲನದ ಅಡಿಯಲ್ಲಿ ಮಹಾತ್ಮ ಗಾಂಧೀಜಿ ಹುತಾತ್ಮ ದಿನದ ಪ್ರಯುಕ್ತವಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾರ್ಮಿಕ ಮಹಿಳೆಯರು, ಪ್ರಧಾನ ಮಂತ್ರಿಗಳ ಹೆಸರಿನಲ್ಲಿದ್ದ ಮನವಿಯನ್ನು ತಹಸೀಲ್ದಾರಿಗೆ ಸಲ್ಲಿಸಿದರು.
ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದ್ದು, ಬೇಡಿಕೆ ಆಧಾರಿತ ಸಾರ್ವತ್ರಿಕ ಉದ್ಯೋಗದ ಹಕ್ಕನ ಮನರೇಗಾ ಕಾನೂನನ್ನು ಪುನರ್ ಸ್ಥಾಪಿಸಬೇಕು. ಈಗ ಜಾರಿಗೆ ತರಲು ಮುಂದಾಗಿರುವ ವಿಬಿ ರಾಮ್ ಜಿ ಕಾನೂನನ್ನು ಹಿಂಪಡೆಯಬೇಕು. ಗಾಂಧಿಜಿಯ ಆಶಯಗಳನ್ನು ಎತ್ತಿ ಹಿಡಬೇಕು ಎಂದು ಆಗ್ರಹಿಸಿದರು.
ಅಶೋಕ ಹೆರೇಕರ, ಯಲ್ಲಪ್ಪ ಕೋಲಕಾರ, ಲತಾ ಮಾಂಡೇಕರ, ಪದ್ಮಾ ಪಾಟೀಲ, ಯಲ್ಲಪ್ಪ ಕುಕಡೊಳ್ಳಿ, ಮಂಜು ಬಡಿಗೇರ ಇತರರಿದ್ದರು.