ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಗರಿಕರು ಹಿರೇಬಾಗೇವಾಡಿ ಪಪಂ ಮುಖ್ಯಾಧಿಕಾರಿ ಅಭಿಷೇಕ ಪಾಂಡೆಗೆ ಮನವಿ ಸಲ್ಲಿಸಿದರು. ರವಿ ಗಾಣಗಿ, ಉಮೇಶ ರೊಟ್ಟಿ ಇತರರಿದ್ದರು. 
ಬೆಳಗಾವಿ

ವಿವಿಧ ಸೌಲಭ್ಯ ಕಲ್ಪಿಸಲು ಆಗ್ರಹ

ಅರ್ಚನಾ ಜಾಧವ
ಹಿರೇಬಾಗೇವಾಡಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಗರಿಕರು ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಭಿಷೇಕ ಪಾಂಡೆಗೆ ಬುಧವಾರ ಮನವಿ ಸಲ್ಲಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ತ್ಯಾಜ್ಯ ಬಿದ್ದು ದುರ್ವಾಸನೆ ಬೀರುತ್ತಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಶುರುವಾಗಿದೆ. ಬೀದಿ ನಾಯಿಗಳ ಹಾವಳಿಯಿಂದ ಜನರು ಭಯದಲ್ಲಿ ಓಡಾಡುವಂತಾಗಿದೆ. ಜತೆಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಸಮರ್ಪಕ ಬೀದಿ ದೀಪ ಹಾಗೂ ಉತ್ತಮ ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ತಮ್ಮಣ್ಣ ಗಾಣಿಗೇರ, ಉಮೇಶ ರೊಟ್ಟಿ, ಸಮೀವುಲ್ಲಾ ಸನದಿ, ರವಿ ಗಾಣಗಿ, ಸದಾನಂದ ಬಾನಿಕಟ್ಟಿ, ಅಬ್ದುಲ್ ಖತೀಬ್, ಶ್ರೀಶೈಲ ರೊಟ್ಟಿ, ಪ್ರಕಾಶ ಕಳಸದ, ಎಸ್.ಎಸ್.ಪಾಟೀಲ, ಶಂಕರಯ್ಯ ಹಿರೇಮಠ, ವೈ.ಎಸ್.ಸುಣಗಾರ, ಶಿವಾನಂದ ಸೊಪ್ಪಡ್ಲ, ಎ.ಎಂ. ಪಾಟೀಲ, ಸುರೇಶ ನಾಯ್ಕರ ಇತರರಿದ್ದರು.