ಸಾಂಗಲಿ-ಕುಪವಾಡ ದಂಪತಿ ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ವತಿಯಿಂದ ಖಾನಾಪುರದಲ್ಲಿ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ವಿಠ್ಠಲ ಹಲಗೇಕರ, ಅರವಿಂದ ಪಾಟೀಲ, ಪ್ರಮೋದ ಕೋಚೇರಿ, ಪಂಡಿತ ಓಗ್ಲೆ, ಸಂಜಯ ಕುಬಾಲ, ಪ್ರಶಾಂತ ಲಕ್ಕೆಬೈಲ್ಕರ, ಸುನೀತಾ ಪಾಟೀಲ ಇತರರಿದ್ದರು. 
ಬೆಳಗಾವಿ

ದಂಪತಿ ಕೊಲೆಗೈದವರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಸಾಂಗಲಿ-ಕುಪವಾಡದಲ್ಲಿ ಈಚೆಗೆ ನಡೆದ ದಂಪತಿ ಕೊಲೆ ಪ್ರಕರಣ ಖಂಡಿಸಿ ವಿಶ್ವ ಹಿಂದೂ ಪರಿಷತ್, ಸನಾತನ ಸಂಸ್ಥೆ, ಬಜರಂಗದಳ, ಶ್ರೀರಾಮ ಸೇನೆ ಹಾಗೂ ಬಿಜೆಪಿ ವತಿಯಿಂದ ಪಟ್ಟಣದ ಛತ್ರಪತಿ ಶಿವಾಜಿ ಚೌಕ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಆ.15ರಂದು ಸಾಂಗಲಿ-ಕುಪವಾಡದಲ್ಲಿ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಮೋಹನ ಕೇಸರಕರ ಹಾಗೂ ಮನೀಷಾ ಕೇಸರಕರ ಕೊಲೆ ಖಂಡನೀಯ. ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ನಡೆಸಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಸರ್ಕಾರ ಕೇಸರಕರ ಕುಟುಂಬದ ಮಕ್ಕಳ ಶಿಕ್ಷಣ, ಪೋಷಣೆ ಹಾಗೂ ಸಂರಕ್ಷಣೆ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಯ್ಯಜಿ ಪಾಟೀಲ, ಮಲ್ಲಪ್ಪ ಮಾರಿಹಾಳ, ಬಸವರಾಜ ಸಾಣಿಕೊಪ್ಪ ಇತರರಿದ್ದರು.