ಜೈನಾಪುರ ಗ್ರಾಮದಲ್ಲಿರುವ ನೀರಿನ ಸಮಸ್ಯೆ ಸರಿಪಡಿಸುವಂತೆ ರೈತರು ಆಗ್ರಹಿಸಿದರು. ರಾಯಗೌಡ ಕೆಳಗಿನಮನಿ, ಸುನೀಲ ಖಾನಾಪುರೆ, ಅಜಿತ ಕೆಳಗಿನಮನಿ, ರಮೇಶ ಖಾನಾಪುರೆ, ಮಹಾದೇವ ಮಠಪತಿ, ಲಗಮಣ್ಣ ಕುಂಬಾರ, ಅಪ್ಪಣ್ಣ ಭಾಕರೆ ಇತರರಿದ್ದರು.
ಚಿಕ್ಕೋಡಿ: ತಾಲೂಕಿನ ಜೈನಾಪುರ ಗ್ರಾಮದ ಬಾವಿಗಳಲ್ಲಿ ನೀರಿದ್ದರೂ ವಿದ್ಯುತ್ ಸಮಸ್ಯೆಯಿಂದ ಹಲವು ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ ಎಂದು ಮಂಗಳವಾರ ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ರಾಯಗೌಡ ಕೆಳಗಿನಮನಿ ಮಾತನಾಡಿ, ಕೆಳಗಿನಮನಿ ತೋಟದಲ್ಲಿರುವ ವಿದ್ಯುತ್ ಪರಿವರ್ತಕ ಬೇರೆ ಕಡೆ ಸ್ಥಳಾಂತರಿಸಿರುವ ಕಾರಣ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯೆ ಕುರಿತು ಅಧಿಕಾರಿಗಳಿಗೆ ತಿಳಿಸಿದರೂ ಕಾರ್ಮಿಕರ ಕೊರತೆ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ವಿಳಂಬವಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ ಹೊರತು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.
ಸ್ಥಳಕ್ಕೆ ಸೆಕ್ಷನ್ ಆಫೀಸರ್ ಆರ್.ಬಿ. ಕುಂಬಾರ ಭೇಟಿ ನೀಡಿ, ಬುಧವಾರ ಟಿಸಿ ಅಳವಡಿಕೆ ಮಾಡುವುದಾಗಿ ಭರವಸೆ ನೀಡಿದರು.