ಬೆಳಗಾವಿಯ ರಾಮತೀರ್ಥ ನಗರ ಬಡಾವಣೆಯ ಉದ್ಯಾನಗಳನ್ನು ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ರಹವಾಸಿಗಳು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ: ರಾಮತೀರ್ಥ ನಗರ ಬಡಾವಣೆಯಲ್ಲಿನ ಉದ್ಯಾನಗಳನ್ನು ಅಭಿವೃದ್ಧಿಪಸುವಂತೆ ಆಗ್ರಹಿಸಿ ರಾಮತೀರ್ಥ ನಗರ ರಹವಾಸಿಗಳು ಶುಕ್ರವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ರಿಗೆ ಮನವಿ ಸಲ್ಲಿಸಿದರು.
ಬಹುದಿನಗಳಿಂದ ನಮ್ಮಲ್ಲಿನ ಉದ್ಯಾನಗಳು ಅಭಿವೃದ್ಧಿಯಾಗಿಲ್ಲ, ನಿರ್ವಹಣೆಯೂ ಇಲ್ಲದೇ ಹಾಳಾಗಿವೆ. ಹುಳ, ಹೂಪ್ಪಡಿಗಳು, ಹಾವು, ಚೇಳು, ನಾಯಿ, ಹಂದಿಗಳ ತಾಣಗಳಾಗಿವೆ. ಇದರಿಂದ ರಹವಾಸಿಗಳು ಉದ್ಯಾನದಲ್ಲಿ ಕಾಲಿಡುವುದಕ್ಕೂ ಭಯ ಪಡುವಂತಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಈ ಬಡಾವಣೆ ಬುಡಾದಿಂದ ಪಾಲಿಕೆಗೆ ಹಸ್ತಾಂತರಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಬಾಕಿ ಇರುವ ಸೌಲಭ್ಯಗಳನ್ನು ಪೂರೈಸಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಬಳಿಕ ಶಾಸಕ ಆಸೀಫ್ ಸೇಠ್, ಬುಡಾ ಮತ್ತು ಪಾಲಿಕೆ ಆಯುಕ್ತರಿಗೂ ಮನವಿ ಸಲ್ಲಿಸಿದರು.
ಮಾಜಿ ಮೇಯರ್ ಎನ್.ಬಿ.ನಿರ್ವಾಣಿ, ವೀರನಗೌಡ ಈಶ್ವರಪ್ಪಗೋಳ, ಬಾಳಪ್ಪ ಸಂಸುದ್ದಿ, ಬಸವರಾಜ ವಾಲಿ, ಮಲ್ಲಿಕಾರ್ಜುನ ಹಿತ್ತಲಮನಿ, ಮಹಾಂತೇಶ ಕುಲಕರ್ಣಿ, ಬಾಹುಬಲಿ ಹರದಿ, ಎಸ್.ಬಿ.ಊರಬಿನಟ್ಟಿ, ಆನಂದ ಕರಕಿ, ಸಿದ್ಲಿಂಗಪ್ಪ ಗಾಳಿ, ಸಚಿನ ಮಾಳಗಿ, ಎ.ಬಿ.ದೇಸಾಯಿ, ರಾಘವ ಪತ್ತಾರ, ರೂಪಾ ಪತ್ತಾರ, ವಿದ್ಯಾ ಕರಕಿ, ಆಶಾ ಸಂಸುದ್ದಿ, ಅನುಸೂಯಾ ಬಶೆಟ್ಟಿ ಇತರರಿದ್ದರು.