ಕುಡಚಿ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಿಸಬೇಕೆಂದು ಒತ್ತಾಯಿಸಿ ಕುಡಚಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು. ಹಮಿದೋದ್ದಿನ್ ರೋಹಿಲೆ, ಮುಷ್ಪಿಕ್ ಜಿನ್ನಾಬಡೆ, ಅಮೀನ್ ವಾಟೆ, ದತ್ತಾ ಸಣ್ಣಕ್ಕಿ ಇತರರಿದ್ದರು.
- ಸರ್ಕಾರಕ್ಕೆ ಮನವಿ ಸಲ್ಲಿಕೆ
- ಸಾರ್ವಜನಿಕರಿಂದ ಪ್ರತಿಭಟನೆ
ಕುಡಚಿ: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ತಾಲೂಕು ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಕುಡಚಿ ವಿಧಾನಸಭಾ ಮತಕ್ಷೇತ್ರವಾಗಿದ್ದು, ಮೊದಲಿನಿಂದಲೂ ಹೋಬಳಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಟ್ಟಣದಲ್ಲಿ ಪುರಸಭೆ ಇದ್ದು, ಪ್ರಸ್ತುತ ಅಂದಾಜು 50 ಸಾವಿರದಷ್ಟು ಜನಸಂಖ್ಯೆ ಹೊಂದಿದೆ. ಪಟ್ಟಣದಲ್ಲಿ ಉಪತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಎಪಿಎಂಸಿ, ರೈತಸಂಪರ್ಕ ಕೇಂದ್ರ, ಪಶುವೈದ್ಯಕೀಯ ಆಶ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಹೆಸ್ಕಾಂ ಹಾಗೂ ನೀರಾವರಿ, ದೂರಸಂಪರ್ಕ ಕಾರ್ಯಾಲಯ, ಬಸ್ ತಂಗುದಾಣ, ರೈಲು ನಿಲ್ದಾಣ, ಪ್ರವಾಸಿಮಂದಿರ ಸೇರಿ ತಾಲೂಕು ಕೇಂದ್ರವಾಗಲು ಬೇಕಾದ ಎಲ್ಲ ಸೌಲಭ್ಯಗಳಿವೆ. ಪಟ್ಟಣವನ್ನು ಶೀಘ್ರವಾಗಿ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು. ಇಲ್ಲವೇ ತೀವ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಹಮಿದೋದ್ದಿನ್ ರೋಹಿಲೆ, ದತ್ತಾ ಸಣ್ಣಕ್ಕಿ, ಮುಷ್ಪಿಕ್ ಜಿನ್ನಾಬಡೆ, ಡಾ.ಸಚಿನ ಮನಗುತ್ತಿ, ಮುಷ್ತಾಕ್ ಬಾಕಶಿರಾಜ್, ಭರತೇಶ ಪಾಟೀಲ, ಅಮೀನ ವಾಟೆ, ಭೀರಪ್ಪ ನರಟ್ಟಿ, ಡಾ.ಎಚ್.ಎಂ.ಸಾಬಡೆ, ಅಮೀನ್ ಜಾತಗಾರ, ಸರ್ರಾಜ್ ಖರೀಂಖಾನ್, ಶ್ರೀಶೈಲ ದರೂರೆ, ಅಷ್ಪಾಕ್ ಅಲಲಾಖಾನ್, ಪ್ರಕಾಶ ಘಾಟಗೆ, ಪ್ರಶಾಂತ ಕಾಂಬಳೆ ಇತರರಿದ್ದರು.