ಮಾಂಜರಿ ಗ್ರಾಮದ ರೈತರು ತಹಸೀಲ್ದಾರ್ ರಾಜೇಶ ಬುರ್ಲಿಗೆ ಮನವಿ ಸಲ್ಲಿಸಿದರು. ಶೀತಲ ಯಾದವ, ಜಯಸಿಂಗ ಕಾಡಾಪುರೆ, ಅಮಿತ ಮಿರಜೆ ಇತರರಿದ್ದರು.
ಗೋಟೂರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಮಾಂಜರಿ ಗ್ರಾಮದ ಅನೇಕ ರೈತರ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿದ್ದು, ಶೀಘ್ರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ರಾಜೇಶ ಬುರ್ಲಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಪೈಪ್‌ಲೈನ್ ಒಡೆದಿದ್ದರಿಂದ ಅಪಾರ ನಷ್ಟವಾಗಿದೆ. ಹಾನಿಯಾದ ಕುರಿತು ಸಮೀಕ್ಷೆ ಕೈಗೊಂಡು ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಅಮಿತ ಮಿರಜೆ, ಅನಿಲ ಪಾಟೀಲ, ಜಯಸಿಂಗ ಕಾಡಾಪುರೆ, ಬಾಬಾಸಾಹೇಬ ಗುಣಕೆ, ಬಾಲಕೃಷ್ಣ ದಿಸಳೆ, ಇಂದ್ರಜಿತ ಘೋರ್ಪಡೆ, ನೇತಾಜಿ ಕಾಡಾಪುರೆ, ನಂದಕುಮಾರ ರಸಾಳೆ, ಪ್ರಕಾಶ ಶಿತೋಳೆ, ಶಾಸ್ತ್ರಿ ಬಾಬರ ಇತರರಿದ್ದರು.