ಬಸವನ ಕುಡಚಿ ಮಹಾಲಕ್ಷ್ಮೀ ನಗರ ನಿವಾಸಿಗಳು ಶಾಸಕ ಆಸೀಫ್ ಸೇಠ್‌ರಿಗೆ ಮನವಿ ಸಲ್ಲಿಸಿದರು.  
ಬೆಳಗಾವಿ

ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹ

ಡಿ.ವಿ. ಕಮ್ಮಾರ
ಬೆಳಗಾವಿ: ಮಹಾನಗರ ಪಾಲಿಕೆಯ ವ್ಯಾಪ್ತಿಯ ಬಸವನ ಕುಡಚಿ ಮಹಾಲಕ್ಷ್ಮೀ ನಗರ ಹಲವಾರು ವರ್ಷಗಳಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಕೂಡಲೇ ಅಲ್ಲಿ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಶಾಸಕ ಆಸೀಫ್ ಸೇಠ್‌ರಿಗೆ ಮನವಿ ಸಲ್ಲಿಸಿದರು.
ಸುಮಾರು 10 ವರ್ಷಗಳಿಂದ ಇಲ್ಲಿ ನೆಲೆಸಿದ್ದೆವೆ. ಮಹಾಲಕ್ಷ್ಮೀನಗರಕ್ಕೆ ಯಾವುದೇ ಸೌಲಭ್ಯ ದೊರೆತಿಲ್ಲ. ಇಲ್ಲಿನ ರಸ್ತೆಗಳು ತುಂಬಾ ಹದಗೆಟ್ಟುಹೋಗಿದ್ದು, ಚರಂಡಿ ಸಹ ಹಾಳಾಗಿವೆ. ಇದರಿಂದ ಮಳೆ ಬಂದಾಗ ಚರಂಡಿ ನೀರು ರಸ್ತೆಯ ಮೇಲೆಲ್ಲೆ ಹರಿದು ಜನ ಓಡಾಡುವದು ದುಸ್ತರವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಚರಂಡಿ ಹಾಗೂ ರಸ್ತೆ ದುರಸ್ತಿ ಮಾಡಿಸಬೇಕು. ಬೀದಿ ದೀಪಗಳ ಕೊರತೆ, ನದಿ ನೀರು ಈ ಭಾಗಕ್ಕೆ ಸರಿಯಾಗಿ ತಲುಪುತ್ತಿಲ್ಲ ಇದರಿಂದ ನಗರ ಜನರಿಗೆ ನೀರಿನ ತೊಂದರೆ ಉಂಟಾಗುತ್ತಿದ್ದು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ನಿರಂತರ ಶುದ್ಧ ಕುಡಿಯವ ನೀರು ಪೂರೈಕೆ ಮಾಡಬೇಕು. ಇಲ್ಲಿರುವ ಸ್ಮಶಾನಭೂಮಿಯನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಕೇಳಿಕೊಂಡರು.