ಬೆಳಗಾವಿಯಲ್ಲಿ ಸೋಮವಾರ ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳ ಸಂಘದಿಂದ ಡಿಎಚ್‌ಒ ಕಚೇರಿಯ ಸಹಾಯಕ ಆಡಳಿತಾಧಿಕಾರಿ ರಮೇಶ ಮಡಿವಾಳರಗೆ ಮನವಿ ಸಲ್ಲಿಸಲಾಯಿತು. ಆಕಾಶ ಥಬಾಜ, ರಾಜೀವ ಮಡಿವಾಳರ, ಕುಬೇರ ಬೋರಣ್ಣವರ ಇತರರಿದ್ದರು. 
ಬೆಳಗಾವಿ

ಹೆಚ್ಚುವರಿ ಅಧಿಕಾರಿಗಳ ನೇಮಕಕ್ಕೆ ಆಗ್ರಹ

ಬೆಳಗಾವಿ: ಕ್ಷಯಮುಕ್ತ ಭಾರತಕ್ಕಾಗಿ ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳನ್ನು ಸ್ಟೈಫಂಡ್ ಆಧಾರದ ಮೇಲೆ, ತಾತ್ಕಾಲಿಕ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ರಾಜ್ಯ ಸರ್ಕಾರಿ ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಸಂಬಂಧ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ಆಡಳಿತಾಧಿಕಾರಿ ರಮೇಶ ಮಡಿವಾಳರಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲೆಯಲ್ಲಿ ಎಲ್ಲ ತಾಲೂಕಾಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳನ್ನು ಗ್ರಾಮೀಣ ಭಾಗದಲ್ಲಿ ಹ್ಯಾಂಡ್ ಹೆಲ್ಡ್ ಎಕ್ಸ್ ರೇ ಯಂತ್ರಗಳನ್ನು ನಿರ್ವಹಿಸಲು ನೇಮಿಸಲಾಗುತ್ತಿದ್ದು, ಆಸ್ಪತ್ರೆಯಲ್ಲಿ ಇರುವವರಿಗೆ ಒತ್ತಡವಾಗುತ್ತಿದೆ.
ಇದರಿಂದ ಆಸ್ಪತ್ರೆಗೆ ಬರುವವರು ಸೇವೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಆಕಾಶ ಥಬಾಜ್, ಅಧ್ಯಕ್ಷ ರಾಜೀವ ಮಡಿವಾಳರ, ಕಾರ್ಯದರ್ಶಿ ಕುಬೇರ ಬೋರಣ್ಣವರ, ಗಾಂಧಿ ಉಪರಿ, ಎಚ್.ಎಸ್.ಕೇರಿ, ರಾಜಶೇಖರ ಬಂಗಾರಿ, ಶಂಕರ ಪಾಟೀಲ, ಯಾಕೂಬ್ ಜಾಂಬೋಟಿ, ಸುಧಾ ಪಾಶ್ಚಾಪುರೆ, ನಾಗಪ್ಪ ವಿಜಾಪುರೆ ಇತರರಿದ್ದರು.