ಬೆಳಗಾವಿ ಜಿಲ್ಲೆಯಲ್ಲಿ ಸಿದ್ಧರಾಮೇಶ್ವರ ಜಯಂತಿ ಆಚರಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಡ್ಡರ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು. ರಾಜು ವಡ್ಡರ, ಮುತ್ತಪ್ಪ ವಡ್ಡರ, ಪರಶುರಾಮ ಗುಳೇದಗುಡ್ಡ, ರಾಜು ಗಾಡಿವಡ್ಡರ, ಭೀಮ ವಡ್ಡರ, ಅಶೋಕ ಗಾಡಿವಡ್ಡರ ಇತರರಿದ್ದರು. 
ಬೆಳಗಾವಿ

ಜಯಂತಿ ಆಚರಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಳಗಾವಿ: ಕಾಯಕಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಕಡ್ಡಾಯವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆಚರಿಸುವಂತೆ ಆದೇಶವಿದ್ದರೂ ಜಿಲ್ಲೆಯ ಅನೇಕ ಕಚೇರಿಗಳಲ್ಲಿ ಜ.14ರಂದು ಜಯಂತಿ ಆಚರಿಸಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವಡ್ಡರ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಈ ಸಂಬಂಧ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಮುಖಂಡರು, ಕೆಲವು ಇಲಾಖೆಗಳ ಮುಖ್ಯಸ್ಥರೇ ಜಯಂತಿ ಆಚರಿಸದೆ ಆದೇಶ ಉಲ್ಲಂಘಿಸಿದ್ದಾರೆ. ಈ ಮೂಲಕ ಸಿದ್ಧರಾಮೇಶ್ವರರಿಗೆ ಅವಮಾನ ಮಾಡಿದ್ದು, ತಕ್ಷಣ ಅಂತಹ ಅಧಿಕಾರಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜು ವಡ್ಡರ, ಮುತ್ತಪ್ಪ ವಡ್ಡರ, ಪರಶುರಾಮ ಗುಳೇದಗುಡ್ಡ, ಹನಮಂತ, ರಾಜು ಗಾಡಿವಡ್ಡರ, ಭೀಮ ವಡ್ಡರ, ಅಶೋಕ ಗಾಡಿವಡ್ಡರ, ಪರಶುರಾಮ ಗಾಡಿವಡ್ಡರ ಇತರರಿದ್ದರು.