ಮೂಡಲಗಿ ಪಟ್ಟಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಗಣ್ಯರು ಚಾಲನೆ ನೀಡಿದರು. ಯಲ್ಲಪ್ಪ ಗದಾಡಿ, ತುಕಾರಾಮ ಮಾದರ, ಪ್ರಕಾಶ ಹಿರೇಮಠ, ಡಿ.ಕೆ.ಕುಳ್ಳೂರ, ರಾಜು ಪೂಜೇರಿ ಇತರರಿದ್ದರು.
- ತಹಸೀಲ್ದಾರ್ ಶ್ರೀಶೈಲ ಗುಡಮೆ ಕಳವಳ
- ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ
ಮೂಡಲಗಿ: ಪರಿಸರ ಸಮಗ್ರ ಜೀವ ಸಂಕುಲದ ಆಧಾರವಾಗಿದ್ದು, ಗಾಳಿ, ನೀರು, ಮಣ್ಣು ಮತ್ತು ಮರಗಳು ಜೀವಿಗಳಿಗೆ ಅತ್ಯಗತ್ಯ.
ಆದರೆ, ಮಾಲಿನ್ಯ ಮತ್ತು ಅರಣ್ಯ ನಾಶದಿಂದ ಪ್ರಕೃತಿ ಅಸಮತೋಲನ ಎದುರಾಗುತ್ತಿದೆ ಎಂದು ತಹಸೀಲ್ದಾರ್ ಶ್ರೀಶೈಲ ಗುಡಮೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಧರ್ಮಟ್ಟಿ ರಸ್ತೆಯ ಎರಡು ಬದಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ನಿಸರ್ಗ ಫೌಂಡೇಷನ್ ಶುಕ್ರವಾರ ಹಮ್ಮಿಕೊಂಡಿದ್ದ ೨೦೦ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮರ ನೆಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ನೀರು ಮತ್ತು ವಿದ್ಯುತ್ ಉಳಿಸುವುದು ಪರಿಸರ ರಕ್ಷಣೆಗೆ ಸಹಾಯಕ. ಪರಿಸರ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ನಿಸರ್ಗ ಫೌಂಡೇಷನ್ ಅಧ್ಯಕ್ಷ ಈರಪ್ಪ ಢವಳೇಶ್ವರ, ಬಿಇಒ ಪ್ರಕಾಶ ಹಿರೇಮಠ, ಉಪ ನೋಂದಣಾಧಿಕಾರಿ ಡಿ.ಕೆ.ಕುಳ್ಳೂರ, ಪಿಎಸ್‌ಐ ರಾಜು ಪೂಜೇರಿ, ಎಂ.ಎಸ್.ನಾಗನ್ನವರ, ಅರಣ್ಯ ಇಲಾಖೆಯ ಅಶೋಕ ಮದುರೆ, ಮಹಾಂತೇಶ ಹಿಪ್ಪರಗಿ, ಪಶು ವೈದ್ಯಾಧಿಕಾರಿ ಪ್ರಶಾಂತ ಕುರುಬೆಟ್ಟ, ಸೀಮಾ ತುಂಗಳ, ಪಿ.ಎಚ್.ಹುಲಗಬಾಳ, ಮುಖಂಡರಾದ ಸಂತೋಷ ಸೋನವಾಲ್ಕರ, ಮರೆಪ್ಪ ಮರೆಪ್ಪಗೋಳ, ಚನ್ನಪ್ಪ ಅಥಣಿ, ಸುರೇಶ ಸಣ್ಣಕ್ಕಿ, ಹನುಮಂತ ಗುಡ್ಲಮನಿ, ಮಲ್ಲು ಬೋಳನವರ, ಸಂಜು ಕಮತೆ, ಓಂ ಸಂತಾ, ಸುನೀಲ ಗಸ್ತಿ, ಮಲ್ಲು ಹೂಗಾರ ಇತರರಿದ್ದರು.