ರಾಜ್ಯ ಭಾರತೀಯ ಕೃಷಿಕ ಸಮಾಜದ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಮಹಾಂತೇಶ ಕಮತ, ಎ್.ಎಸ್.ಸಿದ್ದನಗೌಡರ, ಶಂಕರ ಕುದುರಿ ಇತರರಿದ್ದರು. 
ಬೆಳಗಾವಿ

ಬೈಲಹೊಂಗಲ ಬರಪೀಡಿತ ತಾಲೂಕು ಘೋಷಿಸಿ

ಬೈಲಹೊಂಗಲ: ಬರ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಬೈಲಹೊಂಗಲ ತಾಲೂಕು ಸೇರಿಸಬೇಕೆಂದು ಆಗ್ರಹಿಸಿ ರಾಜ್ಯ ಭಾರತೀಯ ಕೃಷಿಕ ಸಮಾಜದ ವತಿಯಿಂದ ನಗರದಲ್ಲಿ ಉಪವಿಭಾಗಾಧಿಕಾರಿಗೆ ಬುಧವಾರ
ಮನವಿ ಸಲ್ಲಿಸಲಾಯಿತು.
ರಾಜ್ಯ ಭಾರತೀಯ ಕೃಷಿಕ ಸಮಾಜ ಅಧ್ಯಕ್ಷ ಮಹಾಂತೇಶ ಕಮತ ಮಾತನಾಡಿ, ರಾಜ್ಯದ ಮಳೆಯಾಧಾರಿತ ತಾಲೂಕುಗಳಲ್ಲಿ ಕಡಿಮೆ ಮಳೆ ಕೊರತೆ ಪ್ರದೇಶ ಪಟ್ಟಿಯಲ್ಲಿ ಬೈಲಹೊಂಗಲ ಸೇರಿಸಿರುವುದು ಸರಿಯಲ್ಲ. ಕೂಡಲೇ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಬೈಲಹೊಂಗಲ ಸೇರಿಸಬೇಕು. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಹಾಗೂ ಬರಗಾಲ ಎದುರಿಸುತ್ತಿರುವ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಭಾರತೀಯ ಕೃಷಿ ಸಮಾಜದ ಸಂಚಾಲಕ ಎ್.ಎಸ್.ಸಿದ್ದನಗೌಡರ ಮಾತನಾಡಿ ದರು.
ಶಂಕರ ಕುದುರಿ, ಮಡಿವಾಳಪ್ಪ ಪೇಂಟೆದ, ಬಸವರಾಜ ಹೋಂಡದ, ಬಸವರಾಜ ಬೆಳವಡಿ, ಸಂತೋಷ ರೇಣಕೆ, ಮಂಜು ಪತ್ತಾರ, ಜ್ಞಾನೇಶ್ವರ ಮಡಿವಾಳ, ಮೂಗಬಸಪ್ಪ ಬನವಣ್ಣವರ, ಸಂಗಪ್ಪ ಬಸಟ್ಟಿ, ವಿಠ್ಠಲ ಬೆಣ್ಣಿ, ಮಲ್ಲಿಕಾರ್ಜುನ ಜಳ್ಳಿ, ಬಸವರಾಜ ಕುದುರಿ, ನಾಗಯ್ಯ ಪೂಜಾರ, ಮೂಗಬಸಪ್ಪ ಮಗನೂರ, ರಾಜು ಸಿಂಗಾರಗೊಪ್ಪ, ಪರಶು ಬೆಣ್ಣಿ, ಗೂಳಪ್ಪ ಹೊಳಿ,

ಮಡಿವಾಳಪ್ಪ ಚಿಕ್ಕೊಪ್ಪ ಇತರರಿದ್ದರು.