ಹಾರೂಗೇರಿ ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಬಿ.ವಿ.ಬಿರಾದಾರ, ಬಾಲಕೃಷ್ಣ ಜಂಬಿಗಿ, ಮಹಾದೇವಿ ಬಿರಾದಾರ ಇತರರಿದ್ದರು. 
ಬೆಳಗಾವಿ

ಶೇ.೧೦ರಷ್ಟು ಲಾಭಾಂಶ ಹಂಚಿಕೆಗೆ ತೀರ್ಮಾನ

ವಿದ್ಯಾ ಶೆಟ್ಟನಗೌಡ್ರ
ಕೋಳಿಗುಡ್ಡ: ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ೭೬.೬೦ ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಬಿರಾದಾರ ಹೇಳಿದರು.
ಹಾರೂಗೇರಿ ಪಟ್ಟಣದ ಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೧೩ನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ೯೧.೭೪ ಲಕ್ಷ ರೂ. ಷೇರು ಬಂಡವಾಳ, ೨.೬೮ ಕೋಟಿ ರೂ. ನಿಽ, ೩೭.೫೦ ಕೋಟಿ ರೂ. ಠೇವಣಿ, ೪೧.೮೭ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, ೨೮.೧೩ ಕೋಟಿ ರೂ. ಸಾಲ ವಿತರಿಸಿದೆ. ಸದಸ್ಯರಿಗೆ ಶೇ.೧೦ರಷ್ಟು ಲಾಭಾಂಶ ನೀಡಲು ತೀರ್ಮಾನಿಸಲಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಬಾಲಕೃಷ್ಣ ಜಂಬಗಿ ಮಾತನಾಡಿ, ಸಹಕಾರ ಸಂಘಗಳು ಸರ್ಕಾರದ ತತ್ತ್ವದಡಿ ಕೆಲಸ ಮಾಡಬೇಕು. ಸದಸ್ಯರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸಂಘದ ಆಧಾರ ಸ್ತಂಭ ಎಂದರು. ಡಾ.ಸಿ.ಆರ್.ಗುಡಸಿ ಮಾತನಾಡಿ, ಸಹಕಾರ ಸಂಘಗಳು ರೈತಾಪಿ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಕಾರಿಯಾಗಿವೆ ಎಂದರು.
ವಿ.ಎಸ್.ಪಾಟೀಲ ಸಂಘದ ಅಧ್ಯಕ್ಷೆ ಮಹಾದೇವಿ ಬಿರಾದಾರ, ಉಪಾಧ್ಯಕ್ಷ ಮುರುಗೆಪ್ಪ ಗದಗ, ನಿರ್ದೇಶಕರಾದ ಮಲ್ಲಪ್ಪ ಬಿರಾದಾರ, ರಾಮಪ್ಪ ಗುರವ, ರಮೇಶ ಕೊಪ್ಪಳ, ಸಿದ್ದಗೌಡ ಪಾಟೀಲ, ಬಸವರಾಜ ಖೋತ, ಶಂಕರ ಮಿರಜಕರ, ವೆಂಕಟೇಶ ಬಿರಾದಾರ ಇತರರಿದ್ದರು. ರವೀಂದ್ರ ಬಿರಾದಾರ ಸ್ವಾಗತಿಸಿದರು. ಶಿವಕುಮಾರ ಶಿರಗೂರ ನಿರೂಪಿಸಿದರು.