ಆಯಾತಪ್ಪಿ ಬಿದ್ದು ಕಾರ್ಮಿಕ ಸಾವು
- ಆಯಾತಪ್ಪಿ ಬಿದ್ದು ಕಾರ್ಮಿಕ ಸಾವು
- ಸಂಕೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ
- ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕಾರ್ಖಾನೆಯಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕ ಸಾವು
ಸಂಕೇಶ್ವರ: ಸಕ್ಕರೆ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕನೊರ್ವ ಕಬ್ಬು ನುರಿಸುವ ಯಂತ್ರದ ಬೆಲ್ಟ್‌ನಲ್ಲಿ ಸಿಲುಕಿರುವ ಘಟನೆ ಭಾನುವಾರ ಸಂಕೇಶ್ವರದಲ್ಲಿ ನಡೆದಿದೆ. ಪಟ್ಟಣದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ.
ಹುಕ್ಕೇರಿ ತಾಲ್ಲೂಕಿನ ಅಮ್ಮಿನಭಾವಿ ಗ್ರಾಮದ ನಿವಾಸಿ ಸಚಿನ ಬಸಪ್ಪ ದ್ಯಾಮಣ್ಣಿ (೩೬) ಮೃತ ಕೂಲಿಕಾರ್ಮಿಕನಾಗಿದ್ದು, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸದ ವೇಳೆ ಸುಣ್ಣ ಸುರಿಯುವಾಗ ಆಯಾ ತಪ್ಪಿ ಬಿದ್ದು ಅವಘಡ ಸಂಭವಿಸಿದೆ.
ಮೃತ ಕೂಲಿ ಕಾರ್ಮಿಕ ಕಳೆದ 10 ದಿನಗಳ ಹಿಂದಷ್ಟೇ ದಿನದ ಆಧಾರದ ಮೇಲೆ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದನ್ನು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.
ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.