ಬೆಳಗಾವಿ: ಅಥಣಿ ತಾಲೂಕಿನ ಮದಬಾವಿ ಕೌಲಗುಡ್ಡ ಮಾರ್ಗದಲ್ಲಿ ಬೈಕ್‌ಗೆ ವಾಹನ ಡಿಕ್ಕಿಯಾಗಿ ಸಹ ಸವಾರ ಹಣಮಾಪುರದ ರಾಮಗೊಂಡ ಉಪ್ಪಾರ (40) ಸ್ಥಳದಲ್ಲೇ ಮೃತಪಟ್ಟಿರುವ ಕುರಿತು ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಹುಕ್ಕೇರಿ ತಾಲೂಕಿನ ಶಿರಗಾಂವ ಬಳಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಧಾರವಾಡ ಕೆಲಗೇರಿಯ ಸಂತೋಷ ಹಂಚಿನಮನಿ (16) ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ
ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ತಾಲೂಕಿನ ಕಣಬರ್ಗಿಯ ಜ್ಯೋತಿರ್ಲಿಂಗ ಗಲ್ಲಿಯಲ್ಲಿ ತಲ್ವಾರ್ ಜಳಪಿಸುತ್ತ ತಿರುಗಾಡುತ್ತಿದ್ದ ಗಂಗಾರಾಮ ಕುಳ್ಳನ್ನವರ(35) ವಿರುದ್ಧ ಮಾಳಮಾರುತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.