ಅಥಣಿ ಗ್ರಾಮೀಣ: ಮೇವು ತರಲು ಬೈಕ್ ಮೇಲೆ ಹೋಗಿದ್ದ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಲಕ್ಕಪ್ಪ ಸುಬಾನ ಕೋಳಿ (50) ಆಯತಪ್ಪಿ ಪಕ್ಕದ ಬಾವಿಯಲ್ಲಿ ಬಿದ್ದು ಮಂಗಳವಾರ ಮೃತಪಟ್ಟಿದ್ದಾರೆ.
ಅಥಣಿ ಪುರಸಭೆಯಲ್ಲಿ ವಾಟರ್ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಕಪ್ಪ ಬೆಳಗ್ಗೆ 5 ಗಂಟೆಗೆ ಕೃಷ್ಣಾ ನದಿಯಲ್ಲಿರುವ ಪುರಸಭೆಗೆ ಸಂಬಂಧಿಸಿದ ಪಂಪ್ಸೆಟ್ ಪ್ರಾರಂಭಿಸಿ ಜಾನುವಾರುಗಳಿಗೆ ಮೇವು ತರಲೆಂದು ಹೊರಟ ವೇಳೆ ಟನೆ ನಡೆದಿದೆ. ವಿಷಯ ತಿಳಿದ ಯುವಕರು ಬಾವಿಯೊಳಗೆ ಇಳಿದು ಮೇಲೆತ್ತುವ ಯತ್ನಿಸಿದರೂ ಪ್ರಯೋಜನವಾಗಿಲ್ಲ. ಅಥಣಿ ಅಗ್ನಿಶಾಮಕ ದಳ ಮೃತದೇಹ ಹೊರ ತೆಗೆದಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ.