ಬೆಳಗಾವಿ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅಣ್ಣಾಸಾಹೇಬ ಜಿಲ್ಲೆ ಮಾತನಾಡಿದರು. ಬಾಲಚಂದ್ರ ಜಾರಕಿಹೊಳಿ, ಅಪ್ಪಾಸಾಹೇಬ ಕುಲಗೊಡೆ, ವಿರೂಪಾಕ್ಷ ಮಾಮನಿ, ನೀಲಕಂಠ ಕಪ್ಪಲಗುದ್ದಿ ಇತರರಿದ್ದರು. 
ಬೆಳಗಾವಿ

ಡಿಸಿಸಿ ಬ್ಯಾಂಕ್‌ಗೆ 56.25 ಕೋಟಿ ರೂ. ನಿವ್ವಳ ಲಾಭ

ರಾಜ್ಯದಲ್ಲಿಯೇ ಅತಿಹೆಚ್ಚು ಠೇವಣಿ ಹೊಂದಿರುವ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಟ್ಟಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಬಿಡಿಸಿಸಿ) ಪ್ರಸಕ್ತ ಸಾಲಿನಲ್ಲಿ 56.25 ಕೋಟಿ ರೂ. ನಿವ್ವಳ ಲಾಭ ಹೊಂದಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೋಲ್ಲೆ ತಿಳಿಸಿದರು.
ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಅತಿ ಹೆಚ್ಚು ಬೆಳೆಸಾಲ ವಿತರಿಸಿದ ಬ್ಯಾಂಕ್ ನಮ್ಮದಾಗಿದೆ. 2025-26ನೇ ಸಾಲಿನಲ್ಲಿ ಜಿಲ್ಲೆಯ 4.77 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3,818.79 ಕೋಟಿ ರೂ. ಬೆಳೆಸಾಲ ವಿತರಿಸಲಾಗಿದೆ. ಅಲ್ಲದೆ, 444 ಜನ ರೈತರಿಗೆ 24.52ಕೋಟಿ ರೂ. ವೆಚ್ಚದಲ್ಲಿ ಟ್ರಾೃಕ್ಟರ್, ಪೈಪಲೈನ್ ಸಾಲ ನೀಡಲಾಗಿದೆ ಎಂದರು.
ರೈತರ, ಗ್ರಾಹಕರ ಸ್ನೇಹಿಯಾಗಿರುವ ಜಿಲ್ಲಾ ಸಹಕಾರಿ ಬ್ಯಾಂಕವು ವರ್ಷದಿಂದ ವರ್ಷಕ್ಕೆ ತನ್ನ ಆರ್ಥಿಕ ವಹಿವಾಟಿನ ಕ್ಷೇತ್ರವನ್ನ ವಿಸ್ತರಿಸಿಕೊಳ್ಳುತ್ತಿದೆ.ಪ್ರಸಕ್ತ ಸಾಲಿನಲ್ಲಿ 9,776 ಕೋಟಿ ರೂ.ದುಡಿಯುವ ಬಂಡವಾಳ, 6,703.35 ಕೋಟಿ ರೂ. ಠೇವಣಿ ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 616.30 ಕೋಟಿ ರೂ. ಠೇವಣಿ ಹೆಚ್ಚಳವಾಗಿದೆ. 165ಸಂಘಗಳಿಗೆ 22.89 ಕೋಟಿ ರೂ. ಗೋಡಾವುನ ಸಾಲ,ದ್ವಿಚಕ್ರ, ಕಾರ,ಜೆಸಿಬಿ, ಟ್ರಕ್,ವಾಣಿಜ್ಯ ಬಾಡಿಗೆ ವಾಹನ, ಮನೆ ಕಟ್ಟಲು, ವೈಯಕ್ತಿಕ ಸಾಲ ಸೇರಿ ಕೃಷಿಯೇತರ 160.28 ಕೋಟಿ ರೂ.ಸಾಲ ಹಾಗೂ ಚಿನ್ನಾಭರಣ ಅಡುವಿನ ಮೇಲೆ 173.36 ಕೋಟಿ ರೂ. ಸಾಲ ಸೇರಿ ಒಟ್ಟು 6,738.19 ಕೋಟಿ ರೂ. ಸಾಲ ನೀಡಲಾಗಿದೆ. 335 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. ಒಟ್ಟಿನಲ್ಲಿ ಬ್ಯಾಂಕವು 2025-26ನೇ ಸಾಲಿನಲ್ಲಿ 13,441 ಕೋಟಿ ರೂ. ಆರ್ಥಿಕ ವಹಿವಾಟು ನಡೆಸಿದೆ ಎಂದು ವಿವರಿಸಿದರು.
ರಾಜ್ಯದಲ್ಲಿಯೇ ಪ್ರಥಮವಾಗಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಸಿಬ್ಬಂದಿಗೆ 1 ಲಕ್ಷ ರೂ. ಆರೋಗ್ಯ ವಿಮೆ, 5ಲಕ್ಷ ರೂ. ಜೀವವಿಮೆ ಹಾಗೂ 10 ಲಕ್ಷ ರೂ. ಅಪಘಾತ ವಿಮೆ ಸೌಲಭ್ಯ ಒದಗಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯು ಬ್ಯಾಂಕಿ ಸಿಬ್ಬಂದಿ ಶೇ. 20.79 ಬೋನಸ್ ನೀಡಲಾಗುತ್ತಿದೆ. ಬ್ಯಾಂಕಿನ ಎಲ್ಲ ಶಾಖೆಗಳಿಗೆ ಎಟಿಎಂ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಬ್ಯಾಂಕಿನ ನಿರ್ದೇಶಕರಾದ ಅಪ್ಪಾಸಾಹೇಬ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ವಿರೂಪಾಕ್ಷ ಮಾಮನಿ, ನಾನಾಸಾಹೇಬ ಪಾಟೀಲ, ಸಿಇಒ ಎನ್.ಜಿ.ಕಲಾವಂತ ಇತರರಿದ್ದರು.
..............
ಬಾಕ್ಸ್
13ಸಕ್ಕರೆ ಕಾರ್ಖಾನೆಗಳಿಗೆ ಸಾಲ ಸೌಲಭ್ಯ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಬೆಳಗಾವಿ, ವಿಜಯಪುರ ಜಿಲ್ಲೆಯ ಸೇರಿ ಒಟ್ಟು 13 ಸಕ್ಕರೆ ಕಾರ್ಖಾನೆಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ವಾರ್ಷಿಕ ಬಡ್ಡಿ, ಅಸಲಿನ ಕಂತನ್ನು ಪಾವತಿಸಿವೆ. ಆದರೆ, ಹುಕ್ಕೇರಿ ತಾಲೂಕಿಕ ಸಂಕೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಗೆ 150 ಕೋಟಿ ರೂ. ಸಾಲ ನೀಡಲಾಗಿದೆ. ಆದರೆ, ಬಡ್ಡಿ 14 ಕೋಟಿ ರೂ. ಸೇರಿ 28 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಸಾಲ ಮರುಪಾವತಿಸದ ಕೆಲ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೋಲ್ಲೆ ತಿಳಿಸಿದರು.
....................
ಬಾಕ್ಸ್
ನಾಲ್ಕು ತಿಂಗಳಲ್ಲಿ ದಾಖಲೆ ವಹಿವಾಟು
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 2025 ನವಂಬರ್ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದ ಆಡಳಿತ ಮಂಡಳಿ ನಾಲ್ಕು ತಿಂಗಳ ಅಧಿಕಾರದ ಅವಧಿಯಲ್ಲಿ ಆರ್ಥಿಕ ವಹಿವಾಟಿನಲ್ಲಿ ದಾಖಲೆ ನಿರ್ಮಿಸಿದೆ. ಕೇವಲ 4 ತಿಂಗಳಿನಲ್ಲಿ 1,620 ಕೋಟಿ ರೂ. ಠೇವಣಿ, 1,200 ಕೋಟಿ ರೂ. ಬಂಡವಾಳ ಹೆಚ್ಚಳವಾಗಿದೆ. 8 ಶಾಖೆಗಳಲ್ಲಿ ಆರಂಭಿಸಿದ್ದು, 112 ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ಅಳವಡಿಸಲಾಗಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
.....................................
ಕೋಟ್ಸ್
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಹಿವಾಟು ಕುರಿತು ಕೆಲವರು ಹರಡಿಸುತ್ತಿರುವ ಸುಳ್ಳು ಸುದ್ದಿಗಳಿಗೆ ಜನರು, ರೈತರು ಕಿವಿಗೊಡಬೇಡಿ. ರೈತರಿಗೆ ಅಧಿಕ ಪ್ರಮಾಣದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ.
- ಬಾಲಚಂದ್ರ ಜಾರಕಿಹೊಳಿ, ಬೆಮುಲ್ ಅಧ್ಯಕ್ಷ, ಶಾಸಕ
...................
ಕೋಟ್ಸ್
ಜಿಲ್ಲೆಯ ಲಕ್ಷಾಂತರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3,818.79 ಕೋಟಿ ರೂ. ಬೆಳಸಾಲ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಬೆಳೆಸಾಲದ ಬಡ್ಡಿ 168 ಕೋಟಿ ರೂ. ಬಾಕಿ ಉಳಿದುಕೊಂಡಿದೆ.
-ಅಣ್ಣಾಸಾಹೇಬ ಜೋಲ್ಲೆ, ಬಿಡಿಸಿಸಿ ಅಧ್ಯಕ್ಷ
....................