ಬೈಲಹೊಂಗಲ ನಗರದಲ್ಲಿ ದಾನಮ್ಮದೇವಿ ರಥದ ಕಲಶಾರೋಹಣ ಜರುಗಿತು. ಪ್ರಮೋದಕುಮಾರ ವಕ್ಕುಂದಮಠ, ವೀರೇಶಶಾಸಿ ನಂದಳ್ಳಿಮಠ, ವಿನಯಶಾಸಿ ನಂದಳ್ಳಿಮಠ ಇತರರಿದ್ದರು. 
ಬೆಳಗಾವಿ

ದಾನಮ್ಮದೇವಿ ರಥೋತ್ಸವ ಇಂದು

ಬೆಳಗ್ಗೆ ಕಲಶಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಡೊಳ್ಳು ಹಾಗೂ ಸುಮಂಗಲೆಯರ ಆರತಿಯೊಂದಿಗೆ ರಥಕ್ಕೆ ಪೂಜೆ ಸಲ್ಲಿಸಿ ಕಲಶಾರೋಹಣ ನೆರವೇರಿಸಲಾಯಿತು.
ದೇವಸ್ಥಾನ ಕಮಿಟಿ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಮಾತನಾಡಿ, ಮೇ 7ರಂದು ಸಂಜೆ 5ಗಂಟೆಗೆ ಶ್ರೀ ದಾನಮ್ಮದೇವಿ ಮಹಾರಥೋತ್ಸವ ನಡೆಯಲಿದೆ. ಭಕ್ತರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ವೀರೇಶಶಾಸಿ ನಂದಳ್ಳಿಮಠ, ವಿನಯಶಾಸಿ ನಂದಳ್ಳಿಮಠ ಹಾಗೂ ಭಕ್ತರು ಇದ್ದರು.