ಜುಗೂಳ ಗ್ರಾಮದಲ್ಲಿ ಕೃಷ್ಣಾ ನದಿ ನೀರು ಇಳಿಕೆಯಾಗಿರುವುದು.
ಅಥಣಿ/ ಕಾಗವಾಡ: ಅಥಣಿ ಹಾಗೂ ಜಮಖಂಡಿ ತಾಲೂಕಿನ ಮಧ್ಯದಲ್ಲಿರುವ ೬ ಟಿಎಂಸಿ ಸಾರ್ಮಥ್ಯದ ಹಿಪ್ಪರಗಿ ಬ್ಯಾರೇಜಿನ ಗೇಟ್ ಹಾನಿಯಾಗಿದ್ದು, ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ.
ಬ್ಯಾರೇಜಿನ ೨೨ನೇ ಗೇಟ್ ಮಂಗಳವಾರ ಹಾನಿಯಾಗಿದ್ದು, ಒಂದೇ ದಿನದಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ೭ ರಿಂದ ೮ ಅಡಿ ಇಳಿಕೆಯಾಗಿದೆ. ಗೇಟ್ ರಿಪೇರಿ ತ್ವರಿತವಾಗದಿದ್ದಲ್ಲಿ ಅಪಾರ ನೀರು ಹರಿದು ಹೋಗುವ ಆತಂಕ ಮೂಡಿದ್ದು, ಅಥಣಿ ಸೇರಿ ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಮಂಗಾವತಿ, ಜುಗೂಳ, ಶಹಾಪುರ, ಕುಸನಾಳ, ಮೊಳವಾಡ, ಉಗಾರ ಬಿಕೆ, ಉಗಾರ ಖುರ್ದ, ಕೃಷ್ಣಾ ಕಿತ್ತೂರು ಸೇರಿ ಶಿರಗುಪ್ಪಿ, ಐನಾಪುರ ಗ್ರಾಮಗಳಿಗೆ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಮುಂದುವರಿದ ರಿಪೇರಿ: ಬ್ಯಾರೇಜ್ ಸ್ಥಳಕ್ಕೆ ನೀರಾವರಿ ಇಲಾಖೆ ಅಽಕಾರಿಗಳು ಭೇಟಿ ನೀಡಿ ಗೇಟ್ ಸರಿಪಡಿಸುವ ಕಾರ್ಯ ತಜ್ಞರಿಂದ ನಡೆದಿದ್ದು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮತ್ತು ಅಽಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ನೀರಾವರಿ ಇಲಾಖೆ ಅಭಿಯಂತ ಪ್ರವೀಣ ಹುಣಸಿಕಟ್ಟಿ ತಿಳಿಸಿದ್ದಾರೆ.