ಹಿರೇಬಾಗೇವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿಯನ್ನು ದಯಾಶೀಲ ಉದ್ಘಾಟಿಸಿದರು. ಅಂಜನಾ ರಾಯ್ಕರ, ಪೂರ್ಣಿಮಾ ಮಠಪತಿ, ಡಾ.ಸುಮಿತಾ ರತನ್‌ಜಿ, ಸತೀಶ ನಾಯ್ಕ ಇತರರಿದ್ದರು.
ಹಿರೇಬಾಗೇವಾಡಿ:
ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆ ಅವರು ಮಹಿಳಾ ಸಬಲೀಕರಣದ ಹಿತದೃಷ್ಟಿಯಿಂದ ಹುಟ್ಟುಹಾಕಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಪ್ರೊ.ಪೂರ್ಣಿಮಾ ಮಠಪತಿ, ದೈವಜ್ಞ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ಅಂಜನಾ ರಾಯ್ಕರ ಮಾತನಾಡಿದರು. ಕಾರ್ಯಕ್ರಮದಲ್ಲಿ ಮನರಂಜನೆ, ಸಂವಾದ, ಆರೋಗ್ಯ ಹಾಗೂ ನೇತ್ರ ತಪಾಸಣೆ ನಡೆಯಿತು. ಶಿವಬಸವೇಶ್ವರ ಸೌಹಾರ್ದ ಸಂಘದ ನಿರ್ದೇಶಕಿ ಶಶಿಕಲಾ ಇಟಗಿ, ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಕೆಪಿಸಿಸಿ ಸದಸ್ಯ ಸುರೇಶ ಇಟಗಿ, ಸಂಜಯ ರಾಯ್ಕರ, ಯೋಜನಾಧಿಕಾರಿ ಯೋಗೀಶ ಕೆ,. ಪ್ರಮಿಳಾ, ಗಂಗಾ ಪಾಟೀಲ, ಮಹಾದೇವಿ ಇಂಚಲ ಇತರರಿದ್ದರು.