ಮಮದಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಅಭಿಯಾನಕ್ಕೆ ಪಿಡಿಒ ವಿನಾಯಕ ಮಾಳಿ ಚಾಲನೆ ನೀಡಿದರು. ಯು.ಎಸ್.ಕಿಣಗಿ, ಸಿ.ಎಂ.ಪಟಾತ್, ಸಂದೀಪ ಥೋರಾತ ಇತರರಿದ್ದರು. 
ಬೆಳಗಾವಿ

ಸೈಕಲ್ ಸವಾರಿ ಆರೋಗ್ಯಕ್ಕೆ ಪೂರಕ

ಮಮದಾಪುರ:
ಗ್ರಾಮ ಪಂಚಾಯಿತಿ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೈನಂದಿನ ಜೀವನದಲ್ಲಿ ಸೈಕ್ಲಿಂಗ್ ರೂಢಿಸಿಕೊಳ್ಳುವುದರಿಂದ ಹದಯದ ಆರೋಗ್ಯ ವದ್ಧಿಸುತ್ತದೆ.
ಪ್ರಸ್ತುತ ದಿನಗಳಲ್ಲಿ ಚಿಕ್ಕ-ಪುಟ್ಟ ಕೆಲಸ ಕಾರ್ಯಗಳಿಗೆ ಬೈಕ್ ಬಳಸುತ್ತೇವೆ. ಬದಲಾಗಿ ಸೈಕಲ್ ಬಳಸುವುದರಿಂದ ಇಂಧನ ಉಳಿತಾಯ, ಹಣ ಉಳಿತಾಯ ಹಾಗೂ ಆರೋಗ್ಯಯುತ ಜೀವನ ನಮ್ಮದಾಗುತ್ತದೆ ಎಂದರು.