ಯುವ ಮುಖಂಡ ಉತ್ತಮ ಪಾಟೀಲ ಸದಲಗಾ ದಾರೇಶ್ವರ ಹಾಗೂ ಜಕ್ಕಮ್ಮದೇವಿ ದೇವರ ದರ್ಶನ ಪಡೆದರು. ದರಿಖಾನ್ ಅಜ್ಜ, ರಾಜು ಶೆಟ್ಟಿ ಇದ್ದರು.
ಬೋರಗಾಂವ: ಪ್ರಸ್ತುತ ದಿನಗಳಲ್ಲಿ ಸಂಸ್ಕೃತಿ ಸಂರಕ್ಷಣೆ ಅಗತ್ಯವಾಗಿದೆ. ಹನ್ನೊಂದು ವರ್ಷಗಳಿಂದ ಸದಲಗಾದಲ್ಲಿ ದರಿಖಾನ್ ಅಜ್ಜ ದೊಡ್ಡ ಪ್ರಮಾಣದ ಯಾತ್ರೆ ಆಯೋಜಿಸುವ ಮೂಲಕ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಮಾಜಿ ಸಂಸದ ರಾಜು ಶೆಟ್ಟಿ ಹೇಳಿದರು.
ಸಮೀಪದ ಸದಲಗಾದಲ್ಲಿ ದಾರೇಶ್ವರ ಮತ್ತು ಜಕ್ಕಮ್ಮದೇವಿ ಯಾತ್ರೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ದರಿಖಾನ್ ಅಜ್ಜ ಮಾತನಾಡಿ, ಪ್ರತಿ ವರ್ಷ ಎಲ್ಲರ ಸಹಕಾರದಿಂದ ಯಾತ್ರೆ ನಡೆಯುತ್ತದೆ. ಯುವಕರಲ್ಲಿ ದೇಶ ಪ್ರೇಮ ಹೆಚ್ಚಿಸಲು, ನಂಬಿಕೆ ಮತ್ತು ಭಕ್ತಿ ಕಾಪಾಡಲು, ಭಾರತೀಯ ಹಬ್ಬಗಳ ಮಹತ್ವ ತಿಳಿಸಲು ವಿವಿಧ ಧಾರ್ಮಿಕ ಕಾರ್ಯ ಸಹಕಾರಿಯಾಗಿವೆ ಎಂದರು.
ಗೀತಾಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ, ಆಂಧ್ರಪ್ರದೇಶದ ಹೊಸೂರಿನ ಅಮ್ಮ ಹೊಸೂರು, ಸಹಕಾರ ರತ್ನ ಉತ್ತಮ ಪಾಟೀಲ, ಪ್ರತಾಪ ಪಾಟೀಲ, ಬಸವರಾಜ ಗುಂಡಕಲ್ಲೆ, ರೈತ ಸಂಘಟನೆ ಅಧ್ಯಕ್ಷ ಗಣೇಶ ಇಳಿಗಾರ, ಸೌರಭ ಶೆಟ್ಟಿ, ಮಹಾದೇವ ಗುಡೇರ, ಸುರೇಶ ಪರಗೊಂಡ, ರಾಜು ಖಿಚಡೆ, ಪಂಕಜ ತಿಪ್ಪನವರ, ರಮೇಶ ಪಾಟೀಲ, ಬಂಟಿ ಪಾಟೀಲ, ತಾತ್ಯಾಸಾಹೇಬ ಬಸಣ್ಣವರ, ರಮೇಶ ಪಾಟೀಲ, ರಮೇಶ ಮಾಲಗಾಂವೆ, ಸಂದೀಪ ಶಿಂಗೆ ಇತರರಿದ್ದರು.