ಕಕಮರಿ ಗ್ರಾಮದ ಅಮ್ಮಾಜೇಶ್ವರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಬಿ.ವಿ.ಅಸ್ಕಿ, ಕಲ್ಮೇಶ ಕನ್ನಾಳ, ಪ್ರಕಾಶ ದಾನಪ್ಪಗೋಳ ಇತರರಿದ್ದರು. 
ಬೆಳಗಾವಿ

ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ

ಕಕಮರಿ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಮುಖ್ಯಶಿಕ್ಷಕ ಬಿ.ವಿ.ಅಸ್ಕಿ ಹೇಳಿದರು.
ಗ್ರಾಮದ ಅಮ್ಮಾಜೇಶ್ವರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಪಾಲಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದು ಮುಖ್ಯ ಎಂದರು.
ಶಿಕ್ಷಕ ಕಲ್ಮೇಶ ಕನ್ನಾಳ ಮಾತನಾಡಿ, ಶಿಕ್ಷಣದಿಂದ ದೇಶದ ಭವಿಷ್ಯ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರೂ ಮಕ್ಕಳನ್ನು ಅಕ್ಷರವಂತರನ್ನಾಗಿ ಮಾಡಬೇಕು ಎಂದರು. ಶಿಕ್ಷಕ ಪ್ರಕಾಶ ದಾನಪ್ಪಗೋಳ, ಶಿಕ್ಷಕಿಯರಾದ ಸಾವಿತ್ರಿ ವಾಲಿ, ಕಲಾವತಿ ಹುನ್ನೂರ, ಐಶ್ವರ್ಯಾ ಜನಗೌಡ, ಪಿ.ಒ.ನೇಮಗೌಡ, ಭುವನೇಶ್ವರಿ ಹಳಮನಿ, ಗೌರಿ ಹಾಲಳ್ಳಿ ಇತರರಿದ್ದರು.