ಬಾಡಗಿ ಗ್ರಾಮದ ಹನುಮಾನ ದೇವರ ಜಾತ್ರಾ ಮಹೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು. ಶಿವಪ್ರಸಾದ ಸ್ವಾಮೀಜಿ, ಚಿದಾನಂದ ಸವದಿ, ಸದಾಶಿವ ಬುಟಾಳಿ, ಮಲ್ಲಪ್ಪ ಡಂಗಿ, ಅಮೋಘ ಖೋಬ್ರಿ ಇತರರಿದ್ದರು.
- ಶಿವಪ್ರಸಾದ ಸ್ವಾಮೀಜಿ ಅಭಿಮತ
- ಮೇಲು-ಕೀಳೆನ್ನುವ ಭಾವ ಬಿಡಿ
ಅರಟಾಳ: ಸಂಸ್ಕೃತಿ ಮತ್ತು ಸಂಸ್ಕಾರ ಅಳವಡಿಸಿಕೊಂಡು ಬಂದಿರುವ ಭಾರತವನ್ನು ವಿಶ್ವಗುರು ಮಾಡುವುದರ ಕಡೆಗೆ ಎಲ್ಲರೂ ಹೆಜ್ಜೆ ಇಡಬೇಕಿದೆ. ಭಕ್ತಿಯಿಂದ ಜಾತ್ರೆ ಆಚರಿಸುತ್ತಿರುವ ನೀವೆಲ್ಲರೂ ಧನ್ಯರು ಎಂದು ಚಿಂಚಲಿ ಸಿದ್ಧ-ಸಂಸ್ಥಾನಮಠ ಶಿವಪ್ರಸಾದ ಸ್ವಾಮೀಜಿ ಹೇಳಿದರು.
ಸಮೀಪದ ಬಾಡಗಿ ಗ್ರಾಮದ ಹನುಮಾನ ದೇವರ ಜಾತ್ರೆ ಓಕುಳಿ ಪ್ರಾರಂಭೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಮೇಲು-ಕೀಳು ಎನ್ನುವ ಭೇದ ಬಿಟ್ಟು ಎಲ್ಲರೂ ಒಂದೇ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಅಥಣಿ ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಮಾತನಾಡಿದರು.
ಅಥಣಿ ಕಾಂಗ್ರೆಸ್ ಹಿರಿಯ ಧುರೀಣ ಸದಾಶಿವ ಬುಟಾಳಿ, ತಾಪಂ ಮಾಜಿ ಸದಸ್ಯ ಮಲ್ಲಪ್ಪ ಡಂಗಿ, ಅಮೋಘ ಖೋಬ್ರಿ ಮಾತನಾಡಿದರು. ಸಂಗಯ್ಯ ಹಿರೇಮಠ ಸ್ವಾಮೀಜಿ, ವೆಂಕಣ್ಣ ಅಸ್ಕಿ, ಸತ್ಯಪ್ಪ ಬಿರಾದಾರ, ಸಾಬು ತೇಲಿ, ರಾಮಚಂದ್ರ ಬಿಜ್ಜರಗಿ, ಶಿವಾನಂದ ನೇಮಗೌಡ, ಬಿ.ಆರ್.ಡಂಗಿ, ಸಿಪಿಐ ಚಂದ್ರಶೇಖರ ಚಿಕ್ಕೋಡಿ, ಚಂದ್ರಶೇಖರ ಸಾಗನೂರ, ಜಿಪಂ ಮಾಜಿ ಸದಸ್ಯ ಗುರಪ್ಪ ದಾಶ್ಯಾಳ, ಕಲ್ಲಪ್ಪ ಕುಂಬಾರ, ಚನ್ನಪ್ಪ ಕಾಗವಾಡ, ಯಲ್ಲಪ್ಪ ಪಡಸಲಗಿ, ಭೀಮಪ್ಪ ಚಿಕ್ಕಾಕೊಂಡಿ, ಮಲ್ಲಪ್ಪ ನೇಮಗೌಡ, ಮಲ್ಲಪ್ಪ ಬಿಜ್ಜರಗಿ, ಶಿದರಾಯ ತುಬಚಿ, ಧನವಂತ ಜಂಬಗಿ, ನಿಂಗಪ್ಪ ಪಾಟೀಲ ಇತರರಿದ್ದರು.