ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಭಿನುಡಿ ಸವದತ್ತಿಯಲ್ಲಿ ದೀಕ್ಷಾ ಅಭಿಯಾನ ಸವದತ್ತಿಯಲ್ಲಿ ಇಷ್ಟಲಿಂಗ ಪೂಜಾ ದೀಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಬಸವಜಯ ಮೃತ್ಯುಂಜಯ್ಯ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಪಂಚನಗೌಡ ದ್ಯಾಮನಗೌಡ್ರ, ಅಲ್ಲಮಪ್ರಭು ಪ್ರಭುನವರ, ಅಡಿವೆಪ್ಪ ಶಿರಸಂಗಿ ಇತರರಿದ್ದರು.
ಸವದತ್ತಿ: ಲಿಂಗಾಯತ ಧರ್ಮದ ಮೂಲ ಆಶಯ ಅರಿತುಕೊಂಡು, ಇಷ್ಟಲಿಂಗ ಪೂಜೆಯನ್ನು ಪ್ರತಿಯೊಬ್ಬರೂ ನಿತ್ಯ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಮಾಮನಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಶ್ರಾವಣ ಮಾಸದ ನಿಮಿತ್ತ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಆ ಮನೆಮನದಲ್ಲಿ ಕೂಡಲಸಂಗಮ ಹಾಗೂ ಇಷ್ಟಲಿಂಗಪೂಜಾ ದೀಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಲಿಂಗಾಯತ ಧರ್ಮವು ಕಾಯಕ, ದಾಸೋಹ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದೆ. ಬಸವಣ್ಣನವರ ವಚನಗಳ ಆದರ್ಶ ಅಳವಡಿಸಿಕೊಂಡಾಗ ಸಮಾಜದಲ್ಲಿ ಸಮಾನತೆ ಹಾಗೂ ಸೌಹಾರ್ದ ಬೆಳೆಯಲು ಸಾಧ್ಯ ಎಂದರು.
ಸಮುದಾಯದ ಬೇಡಿಕೆಗಳಿಗಾಗಿ ನಡೆಯುತ್ತಿರುವ ಮೀಸಲಾತಿ ಚಳವಳಿಗೆ ಸಂಘಟಿತ ಶಕ್ತಿ ಅಗತ್ಯವಿದ್ದು, ಪ್ರತಿಯೊಬರೂ ಬೆಂಬಲವಾಗಿ ನಿಲ್ಲಬೇಕು ಎಂದರು. ಜಿಲ್ಲಾ ಗೌರವಾಧ್ಯಕ್ಷ ಪಂಚನಗೌಡ ದ್ಯಾಮನಗೌಡರ, ಸವದತ್ತಿ ತಾಲೂಕು ಅಧ್ಯಕ್ಷ ಅಲ್ಲಮಪ್ರಭು ಪ್ರಭುನವರ, ಯರಗಟ್ಟಿ ತಾಲೂಕು ಅಧ್ಯಕ್ಷ ಅಡಿವೆಪ್ಪ ಶಿರಸಂಗಿ ಮಾತನಾಡಿದರು. ಬಸವರಾಜ ಕಪ್ಪನ್ನವರ, ನಾಗಪ್ಪ ಬೆಂಡಿಗೇರಿ, ಬಸವರಾಜ ಪುಟ್ಟಿ, ಪರ್ವತಗೌಡ ಪಾಟೀಲ, ರಾಮನಗೌಡ ಗೀದಿಗೌಡ್ರ, ಮಹೇಶ ತಿಗಡಿ, ಮಡಿವಾಳಪ್ಪ ಪೆಂಟೆದ, ಚಂದ್ರಪ್ಪ ಉಳ್ಳಿಗೇರಿ, ನಾಗಪ್ಪ ಪ್ರಭುನವರ, ಬಂಗಾರಪ್ಪ ಹರಳಿ,
ಜಿ.ಎಸ್.ತೋಟಗೇರ ಇತರರಿದ್ದರು.