ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಸೊಯಾಬಿನ್ ಬೆಳೆ ಸಂರಕ್ಷಣೆ ಕುರಿತು ರೈತರು ಎಚ್.ಡಿ.ಕೋಳೇಕ ತಿಳುವಳಿಕೆ ಮೂಡಿಸಿದರು. ಸಹದೇವರ ಯರಗೊಪ್ಪ,, ಸಿ.ಐ,.ಹೊಗಾರ, ಬಸವರಾಜ ದಳವಾಯಿ ಇತರರಿದ್ದರು.
ಬೆಳಗಾವಿ:ಮುಂಗಾರ ಹಂಗಾಮಿನಲ್ಲಿ ಮಳೆ ಕೊರತೆ, ಹವಾಮಾನ ವೈಪರಿತ್ಯದಿಂದಾಗಿ ಬೆಳೆ ಹಾನಿ ಸಂಕಷ್ಟಕ್ಕೆ ಸಿಲುಕಿರುವ ರೈತರ ರಕ್ಷಣೆಗೆ ದಾವಿಸಿರುವ ಕೃಷಿ ಇಲಾಖೆಯು ಶನಿವಾರ ಒಂದೇ ದಿನ 95 ಹಳ್ಳಿಗಳಲ್ಲಿ ಬೆಳೆ ಸಂರಕ್ಷಣಾ ಅಭಿಯಾನ ನಡೆಸುವ ಮೂಲಕ ವಿನೂತನ ಸಾಧನೆ ಮಾಡಿದೆ.
ಹೌದು. ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಸೊಯಾಬಿನ್ ಬಿತ್ತನೆಯಾಗಿರುವ ಬೈಲಹೊಂಗಲ, ನೇಸರಗಿ, ಹಿರೇಬಾಗೇವಾಡಿ ಹೋಬಳಿಗಳ ವ್ಯಾಪ್ತಿಯ 95 ಹಳ್ಳಿಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಒಳಗೊಂಡಿರುವ ಪ್ರತ್ಯೇಕ 18 ತಂಡಗಳು ಬೆಳೆ ಸಂರಕ್ಷಣಾ ಅಭಿಯಾನ ಕೈಗೊಂಡು ರೈತರಿಗೆ ಕೀಟ ನಿರ್ವಹಣೆ, ಬೆಳೆ ಸಂರಕ್ಷಣೆ, ಔಷಧಿ ಸಿಂಪಡಣೆ, ಬೆಳೆ ವಿಮೆ, ರಸಗೊಬ್ಬರ, ಬಿತ್ತನೆ ಬೀಜ, ಸಬ್ಸಿಡಿ ಸೌಲಭ್ಯ ಹೀಗೆ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದ್ದಾರೆ. ಈ ಅಬಿಯಾನದಲ್ಲಿ 6 ಸಾವಿರ ರೈತರು ಮಾಹಿತಿ ಪಡೆದುಕೊಂಡಿದ್ದಾರೆ.
ಇದಕ್ಕೊ ಮೊದಲು ಬೈಲಹೊಂಗಲ ಪಟ್ಟಣದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ಬೆಳೆ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ, ಬೆಳೆ ಸಂರಕ್ಷಣಾ ಅಭಿಯಾನದಲ್ಲಿ ರೈತರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿ ನೀಡುವ ಸಲಹೆಗಳಂತೆ ಬೆಳೆ ಸಂರಕ್ಷಣೆ ಮಾಡಿ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ.ಕೋಳೇಕರ್ ಮಾತನಾಡಿ, ಮಳೆ ಕೊರತೆ ಹಾಗೂ ಪದೇ ಪದೇ ಬದಲಾಗುತ್ತಿರುವ ಹವಾಮಾನದಿಂದ ಬೆಳೆಗಳಿಗೆ ರೋಗ ತಗಲು ಸಾಧ್ಯತೆಯಿದೆ. ಈ ಹಿನ್ನೆಲೆ ರೈತರಿಗೆ ಬೆಳೆ ಸಂರಕ್ಷಣೆಗೆ ಹೇಗೆ ಮಾಡಬೇಕು, ಯಾವ ರೀತಿಯ ಔಷಧಿ ಸಿಂಪಡಣೆ ಮಾಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ತಿಳುವಳಿಕೆ ನೀಡುವ ನೀಟ್ಟಿನಲ್ಲಿ ಬೆಳೆ ಸಂರಕ್ಷಣಾ ಅಭಿಯಾನ ಕೈಗೊಂಡಿದ್ದೇವೆ. ರೈತರು ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು.
ಕೃಷಿ ಸಮಾಜದ ಅಧ್ಯಕ್ಷ ಗುರು ಮೆಟಗುಡ್ಡ, ಸಹ ನಿರ್ದೇಶಕ ಸಹದೇವರ ಯರಗೊಪ್ಪ,, ಸಿ.ಐ,.ಹೊಗಾರ, ಬಸವರಾಜ ದಳವಾಯಿ ಇತರರಿದ್ದರು.