ಮರಕುಂಬಿ ಗ್ರಾಮದಲ್ಲಿ ಕೃಷಿ ಇಲಾಖೆ, ಕೆವಿಕೆ ಆಶ್ರಯದಲ್ಲಿ ಶನಿವಾರ ತರಬೇತಿ ಕಾರ್ಯಕ್ರಮ ಜರುಗಿತು. ಡಾ.ಎಸ್.ಎಸ್.ಹಿರೇಮಠ, ಎಂ.ಎ.ಅಮಠೆ, ರವಿ ಕುರಬೆಟ್ಟ, ಶ್ವೇತಾ ಕೋಟಗಿ ಇತರರಿದ್ದರು.
ಮುರಗೋಡ: ಸೊಯಾಬೀನ್ ಬೆಳೆಯಲ್ಲಿ ಬರುವ ರೋಗ ಮತ್ತು ಕೀಟಗಳ ಸಮಗ್ರ ಬೆಳೆ ನಿರ್ವಹಣೆ ಬಗ್ಗೆ ರೈತರು ಮಾಹಿತಿ ಹೊಂದಿರಬೇಕು ಎಂದು ಕೆವಿಕೆ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಎಸ್.ಎಸ್.ಹಿರೇಮಠ ಹೇಳಿದರು.
ಮರಕುಂಬಿ ಗ್ರಾಮದಲ್ಲಿ ಕೃಷಿ ಇಲಾಖೆ, ಕೆವಿಕೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಷಿ ಅಧಿಕಾರಿ ಎಂ.ಎ.ಅಮಠೆ, ಪ್ರಗತಿ ಪರ ರೈತರಾದ ರವಿ ಕುರಬೆಟ್ಟ, ಬಳಿಕ ರೈತರು, ವಿಜ್ಞಾನಿಗಳು ಸೋಯಾಬೀನ್ ಬೆಳೆದ ಜಮೀನುಗಳಿಗೆ ತೆರಳಿ ರೋಗ ಮತ್ತು ಕೀಟಗಳ ಪ್ರಾಯೋಗಿಕ ಗುರುತಿಸುವ ಕುರಿತು ವಿವರಿಸಿದರು.
ಎಟಿಎಂ ಅಧಿಕಾರಿ ಶ್ವೇತಾ ಕೋಟಗಿ, ಸೋಮಪ್ಪ ಬೈಲವಾಡ, ಪುಂಡಲೀಕಪ್ಪ ಹೂಲಿ, ರಾಯನಗೌಡ ಪಾಟೀಲ, ಮಲ್ಲಿಕಾರ್ಜುನ ಬೈಲವಾಡ, ಶಿವಾನಂದ ಗುರಕ್ಕನವರ, ಈರಪ್ಪ ಮೇಟಿ ಇತರರಿದ್ದರು.