ನೌಕರಿ ಆಸೆ ತೋರಿಸಿ ವಂಚನೆ 
ಬೆಳಗಾವಿ

ನೌಕರಿ ಕೊಡಿಸುವುದಾಗಿ ವಂಚನೆ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ನೌಕರಿ ಆಸೆ ತೋರಿಸಿ ವಂಚನೆ
  • ಮ್ಯಾಟರಮೋನಿ ಪರಿಚಯ
  • ಯುವತಿಗೆ ಪಂಗನಾಮ
ಮ್ಯಾಟರಮೋನಿಯಲ್ಲಿ ಪರಿಚಯ,
ನೌಕರಿ ಆಸೆ ತೋರಿ ಹಣ ವಂಚನೆ
ಚಿಕ್ಕೋಡಿ: ಮ್ಯಾಟರಮೋನಿ ಆಪ್ ನಲ್ಲಿ ಪರಿಚಯ ಮಾಡಿಕೊಂಡ ಯುವತಿಗೆ ನೌಕರಿ ಆಸೆ ತೋರಿ ಯುವತಿಗೆ 2 ಲಕ್ಷ ರೂ.ವಂಚಿಸಿರುವ ಘಟನೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಮ್ಮಣಗಿ ಗ್ರಾಮದ ಯುವತಿ ಕವಿತಾ ಸುರೇಶ ಡಾಳಿ(೩೦) ಹಣ ಕಳೆದುಕೊಂಡ ಯುವತಿ.ಈಕೆಗೆ ಆರೋಪಿ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ನಿವಾಸಿ ಸಂತೋಷ ಅಡಿವೆಪ್ಪ ಚಂದರಗಿ ವಂಚಿಸಿದ್ದಾನೆ..ಈತ ಯುವತಿಯನ್ನು ಮ್ಯಾಟರಮೋನಿ ಆಪ್ ನಲ್ಲಿ ಪರಿಚಯ ಮಾಡಿಕೊಂಡ ನಂತರ ಯುವತಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸಿ ನಂತರ ಮದುವೆಯಾಗುವುದಾಗಿ ನಂಬಿಸಿ ಹಂತ ಹಂತವಾಗಿ ಒಟ್ಟು 2 ಲಕ್ಷಕ್ಕೂ ಅಧಿಕ ಹಣ ಇದೆ ಎಂದು ವಂಚಿಸಿದ್ದಾನೆ ಯುವತಿ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.