ಅಥಣಿ ನಗರದಲ್ಲಿ ಕವರ್ಡ್ ಕೇಬಲ್ ಅಳವಡಿಕೆ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಜಿ.ವಿ.ಸಂಪನ್ನವರ, ಶಿವಲೀಲಾ ಬುಟಾಳೆ, ಭುವನೇಶ್ವರಿ ಯಂಕಚ್ಚಿ, ದತ್ತಾ ವಾಸ್ಟರ್ ಇತರರಿದ್ದರು.
ಅಥಣಿ: ನಗರದ ಸುರಕ್ಷತೆಗೆ ಆದ್ಯತೆ ನೀಡಿದ್ದು, ಹಳೆಯ ವಿದ್ಯುತ್ ತಂತಿಗಳಿಂದಾಗುತ್ತಿದ್ದ ತೊಂದರೆ ತಪ್ಪಿಸಲು ಕವರ್ಡ್ ಕೇಬಲ್ ಅಳವಡಿಸಲಾಗುತ್ತಿದೆ. ಇದರಿಂದ ವಿದ್ಯುತ್ ನಷ್ಟ ಕಡಿಮೆಯಾಗಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಹೆಸ್ಕಾಂ ವತಿಯಿಂದ ನಗರದ ಜನದಟ್ಟಣೆ ಪ್ರದೇಶ ಹಾಗೂ ಮುಖ್ಯರಸ್ತೆಗಳಲ್ಲಿ ಕವರ್ಡ್ ಕೇಬಲ್ ಕಂಡಕ್ಟರ್ ಮತ್ತು ಸ್ಪನ್ ಪೋಲ್ ಡಿಎಸಿ ಅಳವಡಿಸುವ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ನಗರದ 27 ವಾರ್ಡ್‌ಗಳಲ್ಲಿ ಹಳೆಯ ವಿದ್ಯುತ್ ತಂತಿಗಳಿಂದಾಗುತ್ತಿದ್ದ ಅವಘಡ, ಶಾರ್ಟ್ ಸರ್ಕ್ಯೂಟ್ ಸಮಸ್ಯೆಗಳಿಗೆ ಕವರ್ಡ್ ಕೇಬಲ್‌ನಿಂದ ಪರಿಹಾರ ದೊರೆಯಲಿದೆ ಎಂದರು.
ಹೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಭಿಯಂತ ಜಿ.ವಿ.ಸಂಪನ್ನವರ ಮಾತನಾಡಿ, ನಗರದಲ್ಲಿ ಮೊದಲ ಹಂತದಲ್ಲಿ ಒಟ್ಟು 6 ಕೋಟಿ ರೂ. ವೆಚ್ಚದಲ್ಲಿ 200 ಕಿ.ಮೀ. ಕವರ್ಡ್ ಕೇಬಲ್ ಅಳವಡಿಸಲಾಗುವುದು ಎಂದರು.
ಹೆಸ್ಕಾಂ ಹಿರಿಯ ಅಧಿಕಾರಿಗಳಾದ ಜಿ.ವಿ.ಸಂಪನ್ನವರ, ಶಬ್ಬಿರ್ ಪಾರ್ಥನಹಳ್ಳಿ, ಗುತ್ತಿಗೆದಾರ ಅಮೀರ್ ಖತೀಬ್, ಸಂಗಮೇಶ ನಾರಗೊಂಡ, ಶಿವಲಿಂಗ ಕೊಕಳೆ, ದ್ವಾರಕೀಶ ಜಾಲಿಹಾಳ, ಶಿವಯೋಗಿ ಗೆಜ್ಜಿ, ಶಂಭುಲಿಂಗ ಮಮದಾಪುರ, ಎಂ.ಡಿ.ತೊದಲಬಾಗಿ, ಆನಂದ ಟೊಣಪಿ, ಸಂತೋಷ ಶಿವಣಗಿ, ಸುರೇಶ ಗೋಟಖಿಂಡಿ, ರಾಜು ಆಲಬಾಳ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಸದಸ್ಯರಾದ ಸಂತೋಷ ಸಾವಡಕರ, ಮಲ್ಲು ಬುಟಾಳೆ, ರಾಜು ಗುಡೊಡಗಿ, ಪ್ರಮೋದ ಬಿಳ್ಳೂರ, ರಾಜು ಬುಲಬುಲೆ ಇತರರಿದ್ದರು.