ಪಾರಿಶ್ವಾಡ ಗ್ರಾಮದ ಶರಣೆ ಮಲ್ಲಮ್ಮ ಗುಳಶೆಟ್ಟಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಹಕಾರಿಗಳ ಸತ್ಕಾರ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಗುರುಸಿದ್ದ ಸ್ವಾಮೀಜಿ, ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಠ್ಠಲ ಹಲಗೇಕರ ಇತರರಿದ್ದರು. 
ಬೆಳಗಾವಿ

ರೈತರ ಪ್ರಗತಿಗೆ ಸಹಕಾರ ಕ್ಷೇತ್ರ ನೆರವು

ರಾಘವೇಂದ್ರಗೌಡ ಭೀ ಪಾಟೀಲ್
ಸಮೀಪದ ಪಾರಿಶ್ವಾಡ ಗ್ರಾಮದ ದಾನಮ್ಮ ದೇವಿ ಮಂಗಲ ಕಾರ್ಯಾಲಯದ ಶರಣೆ ಮಲ್ಲಮ್ಮ ಗುಳಶೆಟ್ಟಿ ಸಭಾಭವನದಲ್ಲಿ ಭಾನುವಾರ ನಡೆದ ಸಹಕಾರಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಖಾನಾಪುರ ತಾಲೂಕಿನ ಅನೇಕ ಗಣ್ಯರು ಹಲವು ದಶಕಗಳ ಹಿಂದೆ ಮಲಪ್ರಭಾ ಸಹಕಾರ ಸಕ್ಕರೆ ಸ್ಥಾಪಿಸುವ ಮೂಲಕ ಈ ಭಾಗದ ಜನತೆಗೆ ಸಹಕಾರ ತತ್ತ್ವದ ಅರಿವು ಮೂಡಿಸಿದ್ದು, ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಹಕಾರ ಚಳವಳಿ ಮುಂದುವರಿಸೋಣ ಎಂದರು.
ಬಿಜೆಪಿ ಮುಖಂಡ ಎಂ.ಬಿ.ಝಿರಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ಹಾಗೂ ಶ್ರೇಷ್ಠ ಸಹಕಾರಿ ಪ್ರಶಸ್ತಿ ವಿಜೇತ ಸುಭಾಷ ಗುಳಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.